Site icon PowerTV

ವೀಕ್ ಎಂಡ್ ಲಾಕ್ ಡೌನ್ ಗೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ..!

ಚಿತ್ರದುರ್ಗ : ವೀಕ್ ಎಂಡ್ ಲಾಕ್ ಡೌನ್ ಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ಯವಾಗಿದೆ. ನಗರದ ಬಸ್ ನಿಲ್ದಾಣ ಸೇರಿದಂತೆ ಬಹುತೇಕ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಅಗಿದೆ, ಇನ್ನೂ ಅಗತ್ಯ ದಿನ ಬಳಕೆ ವಸ್ತುಗಳು ಸೇರಿದಂತೆ ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ ,ತರಕಾರಿ, ಹೂವು ಹಣ್ಣು ಅಂಗಡಿಗಳು ಹೊರತು ಪಡಿಸಿ ಎಲ್ಲವನ್ನು ಬಂದ್ ಮಾಡಲಾಗಿದೆ. ಇನ್ನು ಲಾಕ್ ಡೌನ್ ವೇಳೆಯಲ್ಲಿ ಅಗತ್ಯವಾಗಿ ರಸ್ತೆಯಲ್ಲಿ ಓಡಾಟ ಮಾಡುವರಿಗೆ ಪೋಲಿಸರು ಎಚ್ಚರಿಕೆ ನೀಡಿದ್ದಾರೆ. ನಗರದ ಗಾಂಧಿ ವೃತ್ತ, ಚಳ್ಳಕೆರೆ ಗೇಟ್ ಹಾಗು ಬೈ ಪಾಸ್ ಬಳಿ ಪೊಲೀಸ್ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿ, ಒಳ ಬರುವ ಹಾಗು ಹೊರ ಹೋಗುವ ವಾಹನಗಳನ್ನ ತಪಾಸಣೆ ಮಾಡಲಾಗುತ್ತಿದೆ.

Exit mobile version