Site icon PowerTV

ಸಂಡೆ ಲಾಕ್ ಡೌನ್ ಎಫೆಕ್ಟ್ ಮಾಂಸ ಕೊಳ್ಳುವವರೆ ಇಲ್ಲ..!

ಹುಬ್ಬಳ್ಳಿ : ಭಾನುವಾರದ ಲಾಕ್ ಡೌನ್ ಪರಿಣಾಮ ಹುಬ್ಬಳ್ಳಿಯಲ್ಲಿ ಮಾಂಸದಂಗಡಿಗಳು ಖಾಲಿಖಾಲಿಯಾಗಿವೆ. ಮಾರುಕಟ್ಟೆಯಲ್ಲಿ ಅಂಗಡಿ ತೆರೆಯುವುದಕ್ಕೆ ಅವಕಾಶ ಇದ್ರು, ಜನರು ಮನೆಯಿಂದ ಹೊರ ಬಾರದ ಹಿನ್ನೆಲೆಯಲ್ಲಿ ಮಾಂಸದಂಗಡಿಗಳು ಗ್ರಾಹಕರಿಲ್ಲದೆ ಖಾಲಿ ಖಾಲಿಯಾಗಿವೆ. ಮಾಂಸ ಮಾರಾಟ ಮಾರ್ಕೆಟ್ ಓಪನ್ ಇದ್ದರು ಜನರಿಲ್ಲದೆ ಮಾರುಕಟ್ಟೆ ಬಿಕೋ ಎನ್ನುತ್ತಿದೆ.
ಸಂಡೇ ಲಾಕ್ ಡೌನ್ ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಅಂಗಡಿ‌ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ಅಲ್ದೆ ಮಾಂಸ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ್ರು, ವ್ಯಾಪಾರ ಮಾತ್ರ ಇಲ್ಲದಾಗಿದೆ.
ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಯ ಬಳಿ ಮಟನ ಮಾರ್ಕೆಟ್‌ಗೆ ಜನರು ಬರ್ತಾ ಇಲ್ಲ.

Exit mobile version