Site icon PowerTV

ಉಡುಪಿ ನಗರದಲ್ಲಿ ಮತ್ತೊಂದು ಪ್ರತಿಷ್ಠಿತ ಹೋಟೆಲ್ ಲಾಕ್ ಡೌನ್..!

ಉಡುಪಿ : ಉಡುಪಿ ನಗರದಲ್ಲಿರುವ ಮತ್ತೊಂದು ಹೆಸರಾಂತ ಮಾಂಸಾಹಾರಿ ಹೋಟೆಲ್ ಸೀಲ್ ಡೌನ್ ಆಗಿದೆ. ಕಳೆದ ಕೆಲವು ದಿನಗಳಿಂದ ಇದೇ ಹೊಟೇಲ್ ನ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಇದೆ ಎನ್ನುವ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ಇತ್ತು. ಆದರೆ ಈ ಬಗ್ಗೆ ಹೋಟೆಲ್ ಮಾಲಕರು ಸ್ಪಷ್ಟನೆ ನೀಡಿದ ಬೆನ್ನಲ್ಲೆ ಮಾಲಕರ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಸದ್ಯ ಆರೋಗ್ಯ ಇಲಾಖೆಯವರು ಹೋಟೆಲ್ ಸೀಲ್ ಡೌನ್ ಮಾಡಿದ್ದಾರೆ. ಅಲ್ಲದೇ ಹೋಟೆಲ್ ಸಿಬ್ಬಂದಿಗಳನ್ನು ಸದ್ಯ ಹೋಂ ಕ್ವಾರಂಟಿನ್ ಮಾಡಲಾಗಿದೆ, ಲಕ್ಷಣಗಳು ಕಂಡು ಬಂದಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ. ಕಳೆದ ವಾರ ಉಡುಪಿ ನಗರದ ಮತ್ತೊಂದು ಪ್ರತಿಷ್ಠಿತ ಹೋಟೆಲ್ ಬಾಣಸಿಗನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ನಗರದ ಎರಡು ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಕೊರೋನಾ ವರದಿಯಾಗಿರುವುದು ಉಡುಪಿ ಜನತೆಯ ಆತಂಕಕ್ಕೆ ಕಾರಣವಾಗಿದೆ.

Exit mobile version