Site icon PowerTV

ಚೀನಾ ವಿಷಯದಲ್ಲಿ ಯಾವುದೇ ರೀತಿಯ ರಾಜೀಗೆ ಭಾರತ ಸಿದ್ದವಿಲ್ಲ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ

ಚೀನಾ ವಿಷಯದಲ್ಲಿ ಯಾವುದೇ ರೀತಿಯ ರಾಜೀಗೆ ಭಾರತ ಸಿದ್ದವಿಲ್ಲವೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ರಾಷ್ಟ್ರೋತ್ಥಾನ ರಕ್ತನಿಧಿ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇಹ ಕ್ಕೆ ಪ್ರಧಾನಿ ಭೇಟಿ ನೀಡಿದ್ದು ಸೈನಿಕರಿಗೆ ಆತ್ಮ ಸ್ಥೈರ್ಯ ತುಂಬಲು, ನಮ್ಮ ಗಡಿ, ನೆಲ ಜಲ ವಿಷಯದಲ್ಲಿ ಭಾರತ ರಾಜೀಗೆ ತಯಾರಿಲ್ಲ. ಈ ಸಂದೇಶವನ್ನು  ಪ್ರಧಾನಿಗಳ ಲೇಹ ಭೇಟಿ ಸಾಬೀತು ಪಡಿಸಿದೆ ಎಂದರು.

ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಅತ್ಯಂತ ಉತ್ತಮ ಆಡಳಿತವನ್ನು ಪ್ರಧಾನಿ ನೀಡಿದ್ದಾರೆ. ದೇಶಕ್ಕೆ ಮತ್ತು ಜಗತ್ತಿಗೆ ನಾಯಕತ್ವ ಏನೂ ಎಂಬುದನ್ನು ತಿಳಿಸಿದ್ದಾರೆ. ಸಿದ್ದರಾಮಯ್ಯನವರು ಮನೆ ಮತ್ತು ಮನೆತನಕ್ಕೆ ಮೀಸಲಿಟ್ಟ ಕಾಂಗ್ರೆಸ್ ಪಕ್ಷದ ತಾಳ ತಂಬೂರಿ ಇಲ್ಲದಂತೆ ಅಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು. ಯಾವುದೇ ಕಾರಣಕ್ಕೂ ದೇಶದ ಒಂದು ಇಂಚು ಭೂಮಿ ಬಿಟ್ಟು ಕೊಡುವ ಪ್ರಶ್ನೆ ಇಲ್ಲ. ಅಲ್ಲದೇ ಎಲ್ಲ ರೀತಿಯ ಹೋರಾಕ್ಕೆ ಭಾರತ ಸಿದ್ದ. ಆದರೆ ಭಾರತ ಶಾಂತಿಯನ್ನು ಪ್ರತಿಪಾದಿಸುವುದು. ಈ ಹಿನ್ನೆಲೆಯಲ್ಲಿ ದೇಶದ ಗಡಿ ಬಗ್ಗೆ ಸಾರ್ವಭೌಮತ್ವದ ಬಗ್ಗೆ ರಾಜೀಯ ಮಾತಿಲ್ಲಾ ಎಂದರು.

ಕೊರೋನಾ ವಿಷಯದಲ್ಲಿ ಎಲ್ಲರು ಜಾಗೃತಿ ವಹಿಸಬೇಕು. ಇಲ್ಲಿಯವರೆಗೆ ಕೊರೋನಾ ಸಮುದಾಯಕ್ಕೆ ಹಬ್ಬಿದೆ ಎಂದು ನನಗೆ ಅನಿಸಿಲ್ಲಾ ಎಂದರು.

Exit mobile version