Site icon PowerTV

ಮದ್ಯದ ಅಂಗಡಿಗಳು ಮುಚ್ಚುವ ಬಗ್ಗೆ ಸರ್ಕಾರದಿಂದ ನಿರ್ದೇಶನ ಬಂದಿಲ್ಲ – ಅಬಕಾರಿ ಸಚಿವ ಹೆಚ್.ನಾಗೇಶ್

ಕೋಲಾರ : ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ಡೌನ್ ಗೆ ಸರ್ಕಾರ ಆದೇಶಿಸಿದೆ. ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿದ್ರೆ ಭಾನುವಾರ ಎಲ್ಲವೂ ಬಂದ್ ಆಗಲಿದೆ. ಆದರೆ, ಲಾಕ್ಡೌನ್ ವೇಳೆ ಮದ್ಯದ ಅಂಗಡಿಗಳು ಮುಚ್ಚುವ ಬಗ್ಗೆ ಅಬಕಾರಿ ಸಚಿವ ನಾಗೇಶ್ ಅವ್ರಿಗೆ ಗೊಂದಲವಿದೆ. ಭಾನುವಾರ ಲಾಕ್ಡೌನ್ ಇರುವುದರಿಂದ ಮದ್ಯದ ಮಳಿಗೆಗಳ ವಹಿವಾಟು ಬಗ್ಗೆ ಕೋಲಾರದಲ್ಲಿ ಮಾಧ್ಯಮದವ್ರು ಪ್ರಶ್ನಿಸಿದಾಗ, ಲಿಕ್ಕರ್ ಶಾಪ್ಗಳು ತೆಗೆಯುವ ಬಗ್ಗೆ ತಿಳಿದುಕೊಂಡು ಮಾಹಿತಿಯನ್ನ ಕೊಡ್ತೀನಿ. ನಮಗೆ ಇದುವರೆಗೂ ಲಿಕ್ಕರ್ ಶಾಪ್ಗಳನ್ನ ಕ್ಲೋಸ್ ಮಾಡುವಂತೆ ಯಾವುದೇ ಆದೇಶ ಸರ್ಕಾರದಿಂದ ನಿರ್ದೇಶನ ಬಂದಿಲ್ಲ. ಈ ಬಗ್ಗೆ ಮಾಹಿತಿ ಬಂದ್ರೆ ತಿಳಿದುಕೊಂಡು ಹೇಳ್ತಿನಿ ಅಂತಾ ಹೇಳಿದ್ರು.

ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.

Exit mobile version