Site icon PowerTV

ಡಾಕ್ಟರ್’ಗು ಬಿಡದ ಹೆಮ್ಮಾರಿ ಕೊರೋನಾ..!

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಬ್ಬ ವೈದ್ಯರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ನಗರದ ಅನ್ನಪೂರ್ಣ ಆಸ್ಪತ್ರೆಯ ಫಿಜಿಶಿಯನ್ ಗೆ ಕೊರೋನಾ ಪಾಸಿಟಿವ್ ಬಂದಿದೆ, ಇತ್ತೀಚೆಗೆ ತಮ್ಮ ತಾಯಿಯನ್ನ ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದೋಯ್ದು ನಿನ್ನೆ ನಗರಕ್ಕೆ ವಾಪಸಾಗಿದ್ದ ವೈದ್ಯ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಅನ್ನಪೂರ್ಣ ಆಸ್ಪತ್ರೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು,
ನರ್ಸಿಂಗ್ ಹೋಂ ನ ಕೆಲವು ಸಿಬ್ಬಂದಿಗಳನ್ನ ಕ್ವಾರಂಟೈನ್ ಮಾಡಲಾಗಿದೆ, ಅಲ್ಲದೇ ಕಡೂರಿನ ಬಸ್ ಕೆಎಸ್ ಆರ್ ಟಿ ಸಿ ಕಂಡಕ್ಟರ್ ಗೂ ಕೊರೋನಾ ವೈರಸ್ ಅಂಟಿದೆ. ಜಿಲ್ಲೆಯಲ್ಲಿ ಇಂದು 3 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಾಹಿತಿ ನೀಡಿದ್ದಾರೆ.

Exit mobile version