Site icon PowerTV

ಜನರೆದುರೇ ಜನಪ್ರತಿನಿಧಿಗಳ ಕಿತ್ತಾಟ!

ತುಮಕೂರು: ಜಿಲ್ಲೆಯ ತಿಪಟೂರು ಶಾಸಕ ಬಿ.ಸಿ.ನಾಗೇಶ್ ನಗರ ಸಭಾ ಸದಸ್ಯ ಯೋಗೇಶ್ ನಡುವೆ ಮಾರಾಮಾರಿ ನಡೆದಿದೆ. ತಿಪಟೂರು ನಗರದ ವಿದ್ಯಾನಗರದ 14 ನೇ ವಾಡ್೯ ರಸ್ತೆ ಕಾಮಗಾರಿ ಉದ್ಘಾಟನೆ ವೇಳೆ ಈ ಘಟನೆ ನಡೆದಿದ್ದು, ಸರ್ಕಾರಿ ಅಧಿಕಾರಿಗಳಿಲ್ಲ ಸದಸ್ಯರಿಗೂ ತಿಳಿಸದೇ ಕಾಮಗಾರಿ ಉದ್ಘಾಟಿಸುತ್ತಿದ್ದಿರಾ ಎಂದಿದ್ದಕ್ಕೆ ಶಾಸಕರು ಮತ್ತು ಅವರ ಬೆಂಬಲಿಗರು ನಗರ ಸಭಾ ಸದಸ್ಯ ಯೋಗೀಶ್ ಮತ್ತು ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆಷ್ಟೇ ಅಲ್ಲದೇ ವಿಡಿಯೋ ದಲ್ಲಿ ಕೂಡ ಶಾಸಕರು ಪುಲ್ ಗರಂ ಆಗಿ ನಗರ ಸಭಾ ಸದಸ್ಯರಿಗೆ ನೀವು ನಗರ ಸಭೆ ಸದಸ್ಯರೇ ಅಲ್ಲಾ ನಿಮಗೆ ಅಧಿಕಾರವೇ ಇಲ್ಲಾ ಎಂದು ಕಿರುಚಾಡುತ್ತಾ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಶಾಸಕರು ದಾಳಿ ಮಾಡಿದ ವಿಡಿಯೋ ಪವರ್ ಟಿವಿಗೆ ಲಭ್ಯವಾಗಿದ್ದು, ಅಭಿವೃದ್ಧಿ ಮಾಡಬೇಕಾದ ಶಾಸಕರೇ‌ ಈ ರೀತಿ ಬೀದಿಯಲ್ಲಿ  ಕಿತ್ತಾಡಿಕೊಂಡರೇ ಹೇಗೆ ಎಂಬುದು ನಮ್ಮ ಪ್ರಶ್ನೆ.

 

ಹೇಮಂತ್ ಕುಮಾರ್. ಜೆ.ಎಸ್ ಪವರ್ ಟಿವಿ ತುಮಕೂರು.

Exit mobile version