Site icon PowerTV

ಶೆಟ್ಟಿಹಳ್ಳಿ ಚರ್ಚ್ ಗೆ ಸಚಿವ ಸಿ.ಟಿ. ರವಿ ಭೇಟಿ..!

ಹಾಸನ : ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ‌.ಟಿ ರವಿ ಅವರು ಹಾಸನ ತಾಲೂಕಿನ ಸಮೀಪದ‌ ಶೆಟ್ಟಿಹಳ್ಳಿಗೆ ಭೇಟಿ ನೀಡಿ ಪುರಾತನ ಕಾಲದ ಚರ್ಚ್ ಕಟ್ಟಡ ಪರಿಶೀಲಿಸಿ‌ ಅಧಿಕಾರಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಶತಮಾನಗಳಷ್ಟು ಹಳೆಯದಾದ ಚರ್ಚ್ ಪ್ರವಾಸಿಗರ ಪ್ರಮುಖ‌ ಆಕರ್ಷಣೆ ಕೇಂದ್ರವಾಗಿರುವುದರಿಂದ ಇಲಾಖೆ ವತಿಯಿಂದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದೆಂದು ಸಚಿವರು ಹೇಳಿದರು.

Exit mobile version