Site icon PowerTV

ಸಂಸದರಿಗೆ ಮಹಿಳೆಯರಿಂದ ಘೇರಾವ್​​​

ಚಿತ್ರದುರ್ಗ : ಸಂಸದ ನಾರಾಯಣ ಸ್ವಾಮಿ ಮತ್ತು ದಾವಣಗೆರೆ ಸಂಸದ ಸಿದ್ದೇಶ್ ಸಂಸದರ ನಿಧಿಯ ವಿವಿಧ ಕಾಮಗಾರಿಗಳ ಭೂಮಿ ಪೂಜೆಗೆ ನಲ್ಲೀಕಟ್ಟೆ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಗ್ರಾಮದ ಮಹಿಳೆಯರು ಸಂಸದರಿಗೆ ಘೇರಾವ್ ಹಾಕಿದ್ದಾರೆ. ಗ್ರಾಮದಲ್ಲಿ ಅನದೀಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತದೆ. ಹೀಗಾಗಿ ಇಲ್ಲಿನ ಮದ್ಯ ಖರೀದಿಸಲು ಅಕ್ಕಪಕ್ಕದ ಜನರು ಇಲ್ಲಿಗೆ ಬರುತ್ತಾರೆ.ಇದರಿಂದಾಗಿ ಮಹಿಳೆಯರು ಮತ್ತು ಮಕ್ಕಳು ಒಡಾಡಲು ಕಷ್ಟವಾಗುತ್ತಿದೆ ಅಂತ ಸಂಸದರ ಬಳಿ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಸಮಸ್ಯೆಗೆ ಸ್ಪಂದಿಸಿದ ಸಂಸದ ನಾರಾಯಣ ಸ್ವಾಮಿ ಸ್ಥಳದಲ್ಲಿ ಇದ್ದ ಪೋಲಿಸ್ ಸಿಬ್ಬಂದಿಗೆ ಕೂಡಲೆ ಬಂದ್ ಮಾಡಿಸಲು ಸೂಚನೆ ನೀಡಿದ್ದಾರೆ

Exit mobile version