Site icon PowerTV

ದತ್ತಪೀಠ ಹಿಂದೂಗಳಿಗೆ ನೀಡುವಂತೆ ಆಗ್ರಹಿಸಿ ಕೋಟಿ ಜಪಯಜ್ಞ: ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ: ದತ್ತಪೀಠವನ್ನು ಹಿಂದೂಗಳಿಗೆ ನೀಡಬೇಕು ಅಲ್ಲದೇ ಸೂಕ್ತ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಹಿಂದೂ ಗಳಿಗೆ ದತ್ತ ಪೀಠವನ್ನು ನೀಡಬೇಕು ಎಂದು ಒತ್ತಾಯಿಸಿ ಜುಲೈ 05 ರಿಂದ ಒಂದು ಕೋಟಿ ಜಪಯಜ್ಞವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ದತ್ತಪೀಠವನ್ನು ಹಿಂದೂಗಳಿಗೆ ನೀಡಬೇಕು ಅಲ್ಲದೇ ಬಾಬಾ ಬುಡನಗಿರಿಯ ಜಾಗೆಯನ್ನು ಮುಸ್ಲಿಂ ಸಮುದಾಯವರಿಗೆ ನೀಡುವ ಮೂಲಕ ಸೌಹಾರ್ದತೆ ನಿರ್ಧಾರವನ್ನು ಕೈಗೊಂಡು ಸುಗ್ರೀವಾಜ್ಞೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಅದು ಮುಜರಾಯಿ ಇಲಾಖೆ ಗೆ ಸೇರಿದ ಸ್ಥಳವಾಗಿದ್ದು,ಹಿಂದೂಗಳಿಗೆ ಸೇರಿದ ಈ ಜಾಗವನ್ನು ಹಿಂದೂಗಳಿಗೆ ಕೊಡಬೇಕು ಎಂದು ಒತ್ತಾಯಿಸಿ 5 ರಂದು ಅವರವರ ಮನೆಯಲ್ಲಿ ಜಪವನ್ನ ಮಾಡುವ ಮೂಲಕ ಒತ್ತಾಯಿಸಲಾಗುತ್ತದೆ ಎಂದು ಅವರು ಹೇಳಿದರು.

Exit mobile version