Site icon PowerTV

ಸಾಮಾಜಿಕ ಅಂತರ ಮರೆತು ನಡೆದ ಟಗರಿನ ಕಾಳಗ..!

ವಿಜಯಪುರ : ಕೊರೋನಾ ಮಹಾಮಾರಿ ಎಲ್ಲೆಡೆ ಒಂದೆಡೆ ಹಬ್ಬುತ್ತಿದ್ದರೆ, ಇನ್ನೊಂದೆಡೆ ಸಾಮಾಜಿಕ ಅಂತರವನ್ನೆ ಮರೆತು ಟಗರಿನ ಕಾಳಗ ನಡೆಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವೀರೇಶ ನಗರದಲ್ಲಿ ಗ್ರಾಮಸ್ಥರು, ಸುತ್ತಮುತ್ತಲಿನ ಹಳ್ಳಿಯವರನ್ನು ಕರೆದುಕೊಂಡು ಟಗರಿನ ಕಾಳಗ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ ಟಗರಿನ ಕಾಳಗ ನಡೆಯಲು ಯಾರು ಅನುಮತಿ ಕೊಟ್ಟಿಲ್ಲ ಆದರೂ ಸಹಿತ ವಿರೇಶನಗರ ಗೆಳೆಯರ ಬಳಗ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಸುತ್ತಮುತ್ತಲಿನ ಹಳ್ಳಿಯ ಹಲವು ಜನರು ಟಗರಿನ ಕಾಳಗ ನೋಡುವ ಭರದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ನಿರ್ಲಕ್ಷ್ಯ ವಹಿಸಿರುವುದು ಟೀಕೆಗೆ ಕಾರಣವಾಗಿದೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಇನ್ನಾದರೂ ಜರುಗಿಸಬೇಕಾಗಿದೆ…

Exit mobile version