Site icon PowerTV

ಮಂಗಳೂರು ACPಗೂ ಕೊರೊನಾ ಪಾಸಿಟಿವ್..!

ಮಂಗಳೂರು : ನಗರದಲ್ಲಿ ಎಸಿಪಿ ಗ್ರೇಡ್ ಅಧಿಕಾರಿಗೂ ಕೊರೋನಾ ಪಾಸಿಟಿವ್ ಬಂದಿದ್ದು, ಪೊಲೀಸ್ ಇಲಾಖೆಯನ್ನೇ ಕಂಗೆಡಿಸಿ ಬಿಟ್ಟಿದೆ. ಸಹಾಯಕ ಪೊಲೀಸ್ ಆಯುಕ್ತರಿಗೆ ಕೊರೊನಾ ಇಂದು ದೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ14 ಪೊಲೀಸರಿಗೆ ಸೋಂಕು ವಕ್ಕರಿಸಿದಂತಾಗಿದೆ‌. ಉಳ್ಳಾಲ ಪೊಲೀಸ್ ಠಾಣೆಯೊಂದರಲ್ಲೇ 12 ಮಂದಿಗೆ ಪಾಸಿಟಿವ್ ಬಂದಿದ್ದರೆ, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಓರ್ವ ಪೊಲೀಸ್ ಪೇದೆಗೆ ಕೊರೊನಾ ದೃಢಪಟ್ಟಿದೆ. ಆರಂಭದಲ್ಲಿ ಉಳ್ಳಾಲ ಠಾಣೆಯಲ್ಲಿ ಬಂಧಿತರಾದ ಖೈದಿಗಳಿಂದ ಕೊರೊನಾ ಹರಡಿತ್ತು ಅನ್ನೋದಾಗಿ ಹೇಳಲಾಗುತ್ತಿದೆ. ಇಷ್ಟಾದರೂ ಪೊಲೀಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಪೊಲೀಸ್ ಸಿಬ್ಬಂದಿಗಳ ಕುಟುಂಬದವರಲ್ಲಿ ಆತಂಕ ಮನೆ ಮಾಡಿದೆ‌.

Exit mobile version