Site icon PowerTV

ಕಾಲುಜಾರಿ ನದಿಗೆ ಬಿದ್ದ ಶಿಕ್ಷಕ ಸಾವು..!

ಕೊಡಗು : ಕೈಕಾಲು ತೊಳೆಯಲು ಹೊದ ಶಿಕ್ಷಕ ಕಾಲು ಜಾರಿ ಕಾವೇರಿ ನದಿಗೆ ಬಿದ್ದು ಸಾವನ್ನಪಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕೊಂಡಗೇರಿಯಲ್ಲಿ ನಡೆದಿದೆ.

ತಮ್ಮ‌ ತೋಟದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕ ತೋಟದ ಕೆಲಸ ಮುಗಿಸಿ ತಮ್ಮ ತೋಟದ ಪಕ್ಕದಲ್ಲೆ ಇದ್ದ ಕಾವೇರಿ ನದಿಯಲ್ಲಿ ಕೈಕಾಲು ತೊಳೆಯಲು ತೆರಳಿದ್ದಾರೆ. ಕೈ ಕಾಲು ತೊಳೆಯಲು ತೆರಳಿದ ಸಂದರ್ಭದಲ್ಲಿ ಕಾಲು ಜಾರಿ ಕಾವೇರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ. 55 ವರ್ಷದ ಜಯ ಪೂವಣ್ಣ ಕೊಳಕೇರಿ ನಿವಾಸಿಯಾಗಿದ್ದು ಪಾರಣೆ ಶಾಲೆಯಲ್ಲಿ ದೈಹಿಕ‌ ಶಿಕ್ಷಕಾರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಕರಣ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ. ಸಿದ್ದಾಪುರ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಮೃತರು ತಾಯಿ, ಪತ್ನಿ, ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಶಿಕ್ಷಕರ ಈ ಅಕಾಲಿಕ ಮರಣಕ್ಕೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

Exit mobile version