Site icon PowerTV

ಹಾಸನದಲ್ಲಿ ಮತ್ತೊಂದು ಬಲಿ ಪಡೆದ ಡೆಡ್ಲಿ ಕೊರೋನಾ ವೈರಸ್..!

ಹಾಸನ : ಜಿಲ್ಲೆಯಲ್ಲಿ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, ಕೊರೊನಾಗೆ ಇಂದು ನಾಲ್ಕನೇ ಬಲಿಯಾಗಿದೆ. 32 ವರ್ಷದ ಕೊರೊನಾ ಪೀಡಿತ ವ್ಯಕ್ತಿ ದಿಢೀರ್ ಸಾವನ್ನಪ್ಪಿದ್ದು, ಮೃತಪಟ್ಟವರು ಹಾಸನ ತಾಲೂಕಿನ ದುದ್ದ ಹೋಬಳಿಯವರೆಂದು ತಿಳಿದುಬಂದಿದೆ. ಕಳೆದ ಶನಿವಾರ ಅಂದರೆ ಜೂನ್ 27 ರಂದು ಬೆಂಗಳೂರಿನಿಂದ ಹಾಸನಕ್ಕೆ ಆಗಮಿಸಿದ್ದ ಸೋಂಕಿತ ವ್ಯಕ್ತಿ, ಜ್ವರವಿದೆಯೆಂದು ಸೋಮವಾರ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಸಂಜೆಯೇ ಸೋಂಕು ಇರೋದು ದೃಢಪಟ್ಟಿದ್ದು, ವರದಿ ಬಂದ ಮಾರನೇ ದಿನವೇ ವ್ಯಕ್ತಿ ಮೃತಪಟ್ಟಿದ್ದಾನೆ. ಜಿಲ್ಲೆಯಲ್ಲಿ ಕೇವಲ 20 ದಿನದ ಅಂತರದಲ್ಲಿ ಡೆಡ್ಲಿ ಕೊರೊನಾ ವೈರಸ್ ನಾಲ್ವರನ್ನು ಬಲಿಪಡೆದುಕೊಂಡಿದೆ. 32 ವರ್ಷದ ವ್ಯಕ್ತಿ ಸಾವನ್ನಪ್ಪಿರೋದು ಹಾಸನ ಜಿಲ್ಲೆಯ ಜನರನ್ನು ನಿಜಕ್ಕೂ ಆತಂಕಕ್ಕೀಡು ಮಾಡಿದೆ‌.

Exit mobile version