Site icon PowerTV

ಉರಗ ತಜ್ಞ ಸ್ನೇಕ್ ಶ್ಯಾಂ ರಿಂದ ಹಾರುವ ಹಾವಿನ ರಕ್ಷಣೆ..!

ಮೈಸೂರು: ನಗರದ ಜನರಲ್ಲಿ ಆತಂಕ ಮೂಡಿಸಿದ್ದ ಹಾರುವ ಹಾವನ್ನ ರಕ್ಷಿಸುವಲ್ಲಿ ಉರಗ ರಕ್ಷಕ ಸ್ನೇಕ್ ಶ್ಯಾಂ ಯಸಸ್ವಿಯಾಗಿದ್ದಾರೆ. ಈ ಮೂಲಕ ಮೈಸೂರಿನ ಜನರಲ್ಲಿ ಇದ್ದ ಆತಂಕ ನಿವಾರಣೆ ಮಾಡಿದ್ದಾರೆ.

ರಾಮಾನುಜ ರಸ್ತೆಯ ಪೈಪ್‌ನಲ್ಲಿ ಅಡಗಿದ್ದ ಹಾವು ಇದೀಗ ಅರಣ್ಯ ಪ್ರದೇಶಕ್ಕೆ ಸೇರಿಕೊಂಡಿದೆ. ಹೆಚ್ಚಾಗಿ ಮಲೆನಾಡು ಭಾಗದಲ್ಲಿ ಕಾಣಸಿಗುವ ಇದು ವಿಷರಹಿತವಾದ ಹಾವಾಗಿದೆ. ಕೆಲ ದಿನಗಳ ಹಿಂದೆ ಎರಡು ಬಾರಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಸಧ್ಯಕ್ಕೆ ಸ್ಥಳೀಯ ಜನರು ನಿರಾಳರಾಗಿದ್ದಾರೆ…

Exit mobile version