Site icon PowerTV

ಆರೋಗ್ಯ ಸಿಬ್ಬಂದಿ ಎಡವಟ್ಟಿನ ಮೇಲೆ ಎಡವಟ್ಟು..!

ಬಳ್ಳಾರಿ : ಬಳ್ಳಾರಿಯಲ್ಲಿ ಆರೋಗ್ಯ ಸಿಬ್ಬಂದಿ ಎಡವಟ್ಟಿನ ಮೇಲೆ ಎಡವಟ್ಟು ಮಾಡಿದ್ದಾರೆ. ನಿನ್ನೆಯಷ್ಟೇ ಅಮಾನವೀಯ ಶವಸಂಸ್ಕಾರದ ವಿಡಿಯೋ ಒಂದು ವೈರಲ್ ಆಗಿತ್ತು. ಅದಕ್ಕೆ ರಾಜ್ಯವ್ಯಾಪಿ ಖಂಡನೆ ಅಗಿ ಜಿಲ್ಲಾಡಳಿತ ಕ್ಷಮೆಯೂ ಕೇಳಿತ್ತು. ಇದೀಗ ಆರೋಗ್ಯ ಸಿಬ್ಬಂದಿಯಿಂದ ಮತ್ತೊಂದು ಎಡವಟ್ಡಿನ ಸರದಿ. ಪಾಸಿಟವ್ ಬಂದ ವ್ತಕ್ತಿಯ ಜೊತೆ ಪತ್ನಿ ಮತ್ತು ಮಗುವನ್ನು ಸಹ ಕರೆದೊಯ್ದದ್ದು ಚರ್ಚೆಗೆ ಗ್ರಾಸವಾಗಿದೆ. ಕನಿಷ್ಟ ಮಾಸ್ಕ್ ಮತ್ತು ಸುರಕ್ಷಾ ಕವಚ ಇಲ್ಲದೇ ಮಗುವನ್ನ ಆಂಬುಲೆನ್ಸ್ ಗೆ ಏರಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕುಡತಿನಿಯ 36 ವರ್ಷದ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಈ ವ್ಯಕ್ತಿ ಜಿಂದಾಲ್ ಉದ್ಯೋಗಿ ಸಹ ಆಗಿದ್ದ. ಜಿಂದಾಲ್ ಕಳೆದ ಎರಡು ವಾರಗಳಿಂದ ನಿರ್ಬಂಧಿತ ವಲಯ ಅಗಿದೆ. ಆದರೂ ವ್ಯಕ್ತಿ ಬಂದಿದ್ದು ಹೇಗೆ? ನಿರ್ಬಂಧಿತ ವಲಯ ಆದೇಶ ಕೇವಲ ಕಣ್ಣೊರೆಸುವ ತಂತ್ರವಾ? ಅಂತ ಅನುಮಾನ ವ್ಯಕ್ತವಾಗ್ತಿವೆ. ವಿಡಿಯೋದಲ್ಲಿ ಮಗು ಮತ್ತು ಪತ್ನಿಯನ್ನು ಕರೆದುಕೊಂಡು ಹೋಗುತ್ತಿರೋದ್ಯಾಕೆ ಅಂತ ಆರೋಗ್ಯ ಇಲಾಖೆ ಇನ್ನೂ ಸ್ಪಷ್ಟಪಡಿಸಿಲ್ಲ.

ಏನೇ ಕ್ವಾರೆಂಟೈನ್ ಅಂದ್ರು ಮಗುವನ್ನು ಪ್ರತ್ಯೇಕವಾಗಿ ಕರೆದೊಯ್ಯಬೇಕಿತ್ತು ಆದ್ರೆ ಇಲಾಖೆ ಈ ಬೇಕಾಬಿಟ್ಟಿ ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗ್ರಾಸವಾಗಿದೆ.

Exit mobile version