Site icon PowerTV

ದೇಶದಲ್ಲಿನ ಹಿಂಸಾಚಾರಕ್ಕೆ ಮೋದಿ, ಶಾ ನೇರ ಹೊಣೆ: ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಸ್ಥಳದ ಪರಿಶೀಲನೆಗೆ  ಮಂಗಳೂರಿಗೆ ತೆರಳುವುದನ್ನು ನಿಷೇಧಿಸಿ ಮಂಗಳೂರಿನ ನಗರ ಆಯುಕ್ತರಿಂದ ನಗರಕ್ಕೆ ನೋಟಿಸ್ ಕೊಟ್ಟಿದ್ದರು. ಇದರ ಹಿನ್ನೆಲೆ ಸಿದ್ದರಾಮಯ್ಯ ನಾನು ಪ್ರತಿಪಕ್ಷ ನಾಯಕ, ನಾನು ಎಲ್ಲಿಗೆ ಬೇಕಾದ್ರು ಹೋಗಬಹುದು. ನನ್ನ ಹಕ್ಕನ್ನೇ ಹತ್ತಿಕ್ಕಿರುವುದು. ಇದನ್ನು ಜನ ಯಾವತ್ತೂ ಸಹಿಸುವುದಿಲ್ಲ. ಏನೇ ಆದರೂ ನಾನು ಸೋಮಾವಾರ ಮಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದು, ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಮೋದಿ, ಶಾ ಕಾರಣ ಎಂದಿದ್ದಾರೆ.

ನಾನು ಸಿಎಂ ಆಗಿದ್ದಾಗ ಲಾಠಿಚಾರ್ಜ್ ಮಾಡಿಸಿರಲಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸುತ್ತಾ, ಇನ್ನು ಕೇಂದ್ರದ ಮಂತ್ರಿ ಗುಂಡು ಹಾರಿಸ್ರಿ ಅಂತಾರೆ. ಆದರೆ ಕೇಂದ್ರ ಸಚಿವರು ಈ ರೀತಿಯ ಹೇಳಿಕೆ  ಕೊಡುವುದು ತಪ್ಪು ಎಂದು ಹೇಳಿದ್ದಾರೆ. ಅಲ್ಲದೇ ಬಿಜೆಪಿಯವರು ಯಾವ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ಇವೆಲ್ಲದಕ್ಕೂ ಮೋದಿ, ಶಾ ಅವರೇ ನೇರ ಹೊಣೆಯಾಗಿದ್ದಾರೆ ಎಂದಿದ್ದಾರೆ. ಉತ್ತರಪ್ರದೇಶದಲ್ಲಿ 11 ಪ್ರಾಣ ತೆತ್ತಿದ್ದು, ಪಶ್ಚಿಮ ಬಂಗಾಳದಲ್ಲೂ ಅಮಾಯಕರ ಬಲಿಯಾಗಿದೆ. ಇನ್ನು ತುಮಕೂರು, ಕೊಪ್ಪಳ, ಬೀದರ್​ನಲ್ಲಿ ಯಾವುದೇ ಪ್ರತಿಭಟನೆ ನಡೆಯುತ್ತಿಲ್ಲ ಆದರೂ ಅಲ್ಲೆಲ್ಲಾ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಅಲ್ಲಿ ಸೆಕ್ಷನ್ ಜಾರಿ ಮಾಡುವ ಅವಶ್ಯಕತೆಯಾದರೂ ಏನಿದೆ? ಎಂದು ಮಾಜಿ ಸಿಎಂ ಗರಂ ಆಗಿದ್ದಾರೆ.

ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ ಇಲ್ವೋ ಅನುಮಾನ ಬರ್ತಿದೆ. ಎಲ್ಲಾ ನಿರ್ಧಾರಗಳನ್ನು ಪೊಲೀಸರೇ ತೆಗೆದುಕೊಳ್ಳುವುದಾದರೆ ಗೃಹ ಸಚಿವರು ಯಾಕೆ? ಸದನದಲ್ಲಿ ಗೃಹ ಸಚಿವರೇ ಉತ್ತರಿಸಬೇಕೆ ಹೊರತು ಪೊಲೀಸರು ಉತ್ತರ ನೀಡಲು ಬರುವುದಿಲ್ಲ. ಅಲ್ಲದೇ ಈ ಬಗ್ಗೆ ನ್ಯಾಯಾಂಗ ತನಿಖೆಯೇ ನಡೆಯಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Exit mobile version