Site icon PowerTV

ಬೈಕಿನಲ್ಲಿ ಕುಳಿತ ರೀತಿ ಶವಪತ್ತೆ | ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ ನೌಕರನ ಕೊಲೆ..!

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ನೌಕರ ಮಹಾದೇವಸ್ವಾಮಿ (28) ಮೃತ ದುರ್ದೈವಿ. ಈತ ಕಾವೇರಿ ಪಂಪ್’ಹೌಸ್ ನಲ್ಲಿ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ನಂಜನಗೂಡು ತಾಲೂಕಿನ ತೆಳ್ಳನೂರಿನ ಹೆಂಡತಿ ಮನೆಗೆ ಹೊರಟಿದ್ದ ಎನ್ನಲಾಗಿದೆ‌.

ಪೊಲೀಸರ ಪ್ರಕಾರ ಹಳೇ ದ್ವೇಷದಿಂದ ದುಷ್ಕರ್ಮಿಗಳು ಅಡ್ಡಗಟ್ಟಿ ತಲೆಗೆ ಹೊಡೆದು ಕೊಂದಿದ್ದಾರೆ, ಹೊಡೆದ ರಭಸಕ್ಕೆ ರಕ್ತಸ್ರಾವವಾಗಿ ಬೈಕಿನಲ್ಲಿ ಕುಳಿತ ಸ್ಥಿತಿಯಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಸದ್ಯ, ಮೃತನ ತಮ್ಮ ಮಹೇಶ್ ದೂರು ನೀಡಿದ್ದಾನೆ. ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Exit mobile version