Site icon PowerTV

ಮಳೆ ಬಿರುಗಾಳಿಗೆ ಹಾರಿಹೋದ್ವು ಮನೆ ಶೀಟುಗಳು..!

ಬಾಗಲಕೋಟೆ : ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಅಪಾರ ಹಾನಿ ಸಂಬವಿಸಿದ್ದು, ಬಿರುಗಾಳಿ ಅವಾಂತರಕ್ಕೆ ಮನೆ ಮೇಲಿನ ಶೀಟುಗಳು ಹಾರಿ ಹೋಗಿವೆ.

ಹೌದು! ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಮತ್ತು ಜಮಖಂಡಿ ತಾಲ್ಲೂಕಿನಲ್ಲಿ ತಡರಾತ್ರಿ ಸುರಿದ ಮಳೆ ಅವಾಂತರ ಸೃಷ್ಠಿಸಿದೆ. ಬನಹಟ್ಟಿ ತಾಲ್ಲೂಕಿನ ಕೆಸರಗೊಪ್ಪ, ಚಿಮ್ಮಡ, ಜಗದಾಳ, ನಾವಲಗಿಯಲ್ಲಿ ಬೀಸಿದ ಬಿರುಗಾಳಿಯ ರಭಸಕ್ಕೆ ಕೆಸರಗೊಪ್ಪ ಗ್ರಾಮದ ಅಡವಯ್ಯ ಎಂಬುವವರ ಮನೆ ಶೀಟುಗಳು ಹಾರಿಹೊಗಿದ್ದು, ಬಾಳೆ ಗಿಡಗಳು ನೆಲಕಚ್ಚಿವೆ. ಇನ್ನು ವಿದ್ಯುತ್ ಟ್ರಾನ್ಸಪಾರ್ಮರ್’ಗಳು ನೆಲಕ್ಕುರುಳಿವೆ. ಅಷ್ಟೆ ಅಲ್ದೆ ಮನೆಯಲ್ಲಿದ್ದ ಕಾಳು-ಕಡ್ಡಿ ಮಳೆಗೆ ನೆನೆದಿವೆ.

Exit mobile version