Site icon PowerTV

ಉರಗ ರಕ್ಷಕನಿಗೆ ಕಚ್ಚಿದ ವಿಷಕಾರಿ ಹಾವು- ಆಸ್ಪತ್ರೆಯಲ್ಲಿ ಸಾವು-ಬದುಕಿನ ಮದ್ಯೆ ಸ್ನೇಕ್ ಡ್ಯಾನಿ ಹೊರಾಟ..

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಎಲ್ಲೆ ಹಾವುಗಳು ಕಂಡು ಬಂದ್ರೆ ಜನರಿಗೆ ನೆನಪಾಗುವ ಮೊಬೈಲ್ ನಂಬರ್ ಸ್ನೇಕ್ ಡ್ಯಶನಿಯದ್ದು.ಹೌದು ಬಾಗಲಕೋಟೆ ನಗರದ ಉರಗ ರಕ್ಷಕ ಸ್ನೇಕ್ ಡ್ಯಾನಿ ಅವರು ಕಸುಬೆ ಉರಗಗಳ ರಕ್ಷಣೆ ಮಶಡುವುದೇ ಅವರ ಹವ್ಯಾಸ.ಆದ್ರೆ ಅದೇ ಹವ್ಯಾಸವೇ ಇಂದು ಅವರ ಜೀವಕ್ಕೆ ಕುತ್ತುತಂದೊಡ್ಡಿದೆ. ಹೌದು ವಿಷಕಾರಿ ಉರಗ ರಕ್ಷಿಸುವ ಬರದಲ್ಲಿ ಅದರ ಕಡಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದಾನೆ ಡ್ಯಾನಿ.ಸ್ನೇಕ್ ಡ್ಯಾನಿ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆತುತ್ತಿದ್ದು ಸ್ವಲ್ಪ ಚೇತರಿಕೆ ಕಂಡಿದ್ದಾರೆ.ಹಾವು ಇದೆ ಬನ್ನಿ ಅಂತಾ ಕಾಲ್ ಮಾಡಿದ್ರೆ ಸಾಕು ಯಾವುದೇ ಫಲಾಪೇಕ್ಷೆ ಇಲ್ಲದೆ ತಕ್ಷಣ ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಸುರಕ್ಷಿತ ಕಾಡಿಗೆ ರವಾನಿಸುವ ಕಾರ್ಯ ಡ್ಯಾನಿ ಮಾಡುವ ಮೂಲಕ ಜನಮನ ಗೆದ್ದಿದ್ದಾರೆ.ಇವರು ಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಲಿ ಎಂದು ಸ್ಥಳೀಯರು ಆಶಿಸುತ್ತಿದ್ದಾರೆ..

Exit mobile version