Site icon PowerTV

ಬಳ್ಳಾರಿಯಲ್ಲಿ ಕೊರೊನಾಗೆ ಇಂದು ಮತ್ತೊಂದ ಸಾವು.

ಬಳ್ಳಾರಿ : ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಇಂದು ಮತ್ತೊಬ್ಬರನ್ನ ಬಲಿ ಪಡೆದಿದೆ. ಜೂನ್ ಹತ್ತೊಂಬತ್ತರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ 73  ಸಂಡೂರು ತಾಲೂಕಿನ ವ್ಯಕ್ತಿ ಇಂದು ಮೃತರಾಗಿದ್ದಾರೆ.

ಅವರು ವಯೋಸಹಜ ಕಾಯಿಲೆಗಳಿಂದ ಸಹ ಬಳಲುತ್ತಿದ್ದರು. ವಿಪರೀತ ರಕ್ತದೊತ್ತಡ, ಸಕ್ಕರೆ ಕಾಯಿಲೆ ಅವರನ್ನ ಬಾದಿಸಿತ್ತು. ಜೊತೆಗೆ ಕೊವಿಡ್ ಪಾಸಿಟಿವ್ ಸಹ ಆಗಿತ್ತು. ಜೂನ್ 22 ರಾತ್ರಿ ಸೋಂಕಿತನನ್ನ ವಿಶೇಷ ಐಸೋಲೇಶನ್ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ತೀವ್ರ ಉಸಿರಾಟ ಮತ್ತು ಅನಿಯಂತ್ರಿತ ಮಧುಮೇಹದ ಕಾರಣ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿದೆ.

ಕೇವಲ ಎರಡೇ ದಿನಗಳ ಅಂತರದಲ್ಲಿ ಐವರ ಸಾವಾಗಿರುವುದು ಅಲ್ಲದೇ 28 ವರ್ಷದ ಯುವಕ ಸಹ ನಿನ್ನೆಯಷ್ಟೇ ಕೊರೊನಾಗೆ ಬಲಿಯಾಗಿದ್ದು ಜಿಲ್ಲಿಯ ಜನರಲ್ಲಿ ಆತಂಕದ ಛಾಯೆ ಮೂಡಿಸಿದೆ..

Exit mobile version