Site icon PowerTV

ಶಿವಮೊಗ್ಗದಲ್ಲಿ ಕೊರೋನಾ ಅಟ್ಟಹಾಸಕ್ಕೆ ವೃದ್ಧೆ ಬಲಿ..

ಶಿವಮೊಗ್ಗ :  ಈ ಮಹಾಮಾರಿ ಕೊರೊನಾ ಗೆ ಶಿವಮೊಗ್ಗದಲ್ಲಿ ಮತ್ತೊಂದು ಡೆತ್ ಆಗಿದೆ.  ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 75 ವರ್ಷದ ವೃದ್ದೆ ಸಾವು ಕಂಡಿದ್ದಾರೆ.  ಆದರೆ, ವೃದ್ಧೆ ಸಾವಿನ ಮೂರು ದಿನದ ಬಳಿಕ ವರದಿಯಲ್ಲಿ ಈ ಅಜ್ಜಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

ಅಂದಹಾಗೆ, ಜಿಲ್ಲೆಯಲ್ಲಿ ಈ ಡೆಡ್ಲಿ ವೈರಸ್ ಗೆ ಇದು ಎರಡನೇ ಬಲಿಯಾಗಿದ್ದು, ಶಿಕಾರಿಪುರ ತಾಲೂಕಿನ ಕವಾಸಪುರ ಗ್ರಾಮದ ವೃದ್ಧೆಯೊಬ್ಬರು, ಉಸಿರಾಟದ ತೊಂದರೆಯಿಂದಾಗಿ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಅಲ್ಲಿಂದ ಅವರನ್ನ ಶಿಕಾರಪುರದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.  ಮೈಲ್ಡ್ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದ ಅಜ್ಜಿಗೆ, ಕೋವಿಡ್-19 ಮಾರ್ಗ ಸೂಚಿಯನ್ವಯ ಶವದ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು.  ಆದರೆ ಇಂದು ಬಂದ ವರದಿಯಲ್ಲಿ ಕೊರೋನಾ ಸೋಂಕು ಇರುವುದು ಧೃಢಪಟ್ಟಿದೆ.

ಇನ್ನೂ ಈ ಹಿನ್ನೆಲೆಯಲ್ಲಿ ವೃದ್ಧೆಗೆ ಚಿಕಿತ್ಸೆ ನೀಡಿದ್ದ 4 ಜನ ವೈದ್ಯರು, ಹಾಗೂ 8 ಜನ ನರ್ಸ್ ಗಳನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ ವೃದ್ಧೆಯ ಕುಟುಂಬಸ್ಥರನ್ನ ಸಹ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಮೃತ ವೃದ್ದೆಯ ಮನೆ ಮತ್ತು  ಗ್ರಾಮ  ಸೀಲ್ ಡೌನ್ ಮಾಡಲಾಗಿದೆ.

Exit mobile version