Site icon PowerTV

ಮನೆ ಸೌಂದರ್ಯಕ್ಕೆ ಅಡ್ಡಿ ಅಂತಾ ಸರ್ಕಾರಿ ಬಸ್ ನಿಲ್ದಾಣ ದ್ವಂಸ ಮಾಡಿದ ಅಧ್ಯಕ್ಷ

 

 ಚಿಕ್ಕಮಗಳೂರು: ರಸ್ತೆ ಪಕ್ಕದಲ್ಲಿರೋ ಮನೆ ಕಾಣವುದಿಲ್ಲ. ಬಸ್ ನಿಲ್ದಾಣ ಮನೆಯ ಸೌಂದರ್ಯಕ್ಕೆ ಅಡ್ಡಿ ಆಗುತ್ತೆಂದು ಗ್ರಾಮೀಣ ಭಾಗದ ಸರ್ಕಾರಿ ಬಸ್ ನಿಲ್ದಾಣವನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಅವರ ಮಕ್ಕಳು ದ್ವಂಸ ಮಾಡಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

 ಎಸ್.ಬಿದರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ದ್ರಾಕ್ಷಾಯಣಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷರ ಸ್ಥಾನವನ್ನ ದುರುಪಯೋಗಪಡಿಸಿಕೊಂಡು ಬಸ್ ನಿಲ್ದಾಣವನ್ನೇ ದ್ವಂಸ ಮಾಡಿದ್ದಾರೆಂದು ಸ್ಥಳಿಯರು ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮನೆಗೆ ದಾರಿ ಇರಲಿಲ್ಲ. ಸಾಲದಕ್ಕೆ ರಸ್ತೆ ಪಕ್ಕದ ಮನೆಗೆ ಬಸ್ ನಿಲ್ದಾಣ ಅಡ್ಡವಾಗಿದ್ದು, ಮನೆಯೂ ಕಾಣ್ತಿರಲಿಲ್ಲ. ಮನೆಯ ಸೌಂದರ್ಯವೂ ಕಾಣುತ್ತಿರಲಿಲ್ಲ ಎಂದು ಅಧ್ಯಕ್ಷೆ ದ್ರಾಕ್ಷಾಯಣಮ್ಮ ಹಾಗೂ ಅವರ ಮಕ್ಕಳು ಪ್ರಭಾಕರ್ ಹಾಗೂ ಜಗದೀಶ್ ಜೆಸಿಬಿ ಹಾಗೂ ಟ್ರ್ಯಾಕ್ಟರ್ ತಂದು ಬಸ್ ನಿಲ್ದಾಣವನ್ನ ನೆಲಮಗೊಳಿಸಿದ್ದಾರೆ. ಇದೀಗ, ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿರೋ ಸಿದ್ದಾಪುರ ಜನ ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದಿದ್ದು ದ್ರಾಕ್ಷಾಯಣಮ್ಮ ಅವರ ಸದಸ್ಯತ್ವನ್ನ ರದ್ದು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಬಸ್ ನಿಲ್ದಾಣ ತೆರವುಗೊಳಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿದ್ದಾರೆ…

 

Exit mobile version