Site icon PowerTV

ಪವರ್ ಟಿವಿ ಅಭಿವೃದ್ದಿಗಾಗಿ ಹಾಗೂ ಗ್ರಾಮಗಳ ಓಳಿತಿಗಾಗಿ ಚಂಡಿಯಾಗ ಹಾಗು ರುದ್ರಹೋಮ ಮಾಡಿಸಿದ ಗ್ರಾಮಸ್ಥರು

 ಚಿತ್ರದುರ್ಗ :  ಕಲ್ಲುಗಣಿಗಾರಿಕೆ ವಿರೋದಿಸಿ ಹೊಳಲ್ಕೆರೆ ತಾಲ್ಲೂಕಿನ ಟಿ.ಎಮ್ಮಿಗನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರು ದೇವರ ಮೊರೆಹೋಗಿದ್ದಾರೆ.ಗ್ರಾಮಸ್ತರ ವಿರೋದ ನಡುವೆಯೂ ಜಿಲ್ಲ ಆಡಳಿತ ಕಲ್ಲುಗಣಿಗಾರಿಕೆ ಅವಕಾಶ ನೀಡಲು ಮುಂದಾಗೀರೋ ಬಗ್ಗೆ ಇಲ್ಲಿನ ಗ್ರಾಮಸ್ಥರು ಹಲವಾರು ಬಾರಿಹೋರಾಟ ಮಾಡಿದ್ದಾರೆ.ಗ್ರಾಮದ ಹೊರವಲಯದಲ್ಲಿ ಇರೋ ಬೆಟ್ಟದಲ್ಲಿ ದೈವಿಕ ಚಿನ್ಹೆಗಳು ಇದೆ.ಇಲ್ಲಿ ಅಂಜನೇಯನ ಪಾದ ಹಾಗು ಗದೆಯ ಗುರುತುಗಳು ಇದೆ ಅಂತ ಗ್ರಾಮಸ್ಥರ ನಂಬಿಕೆ.ಇಂತಹ ಕಡೆ ಗಣಿಗಾರಿಕೆಗೆ ಅವಕಾಶ ನೀಡಬಾರದು ಅಂತ ಗ್ರಾಮಸ್ತರ ಹೋರಾಟ.ಇನ್ನೂ ಕಲ್ಲುಗಣಿಗಾರಿಕೆ ಪ್ರಾರಂಬವಾದ್ರೆ ಸುತ್ತಮುತ್ತಲಿನ ಬೋರೆವೆಲ್ ಹಾಗು ಕುಡಿಯುವ ನೀರಿನ ಕೆರೆಗಳ ನಾಶವಾಗೊ ಭೀತಿಯಲ್ಲಿ ಇದ್ದಾರೆ ಇಲ್ಲಿನ ಜನರು.ಈ ಕುರಿತು ಸ್ಥಳೀಯರು ಸಮಸ್ಯೆಗಳನ್ನು ಸಮಗ್ರವಾಗಿ ಪವರ್ ಟಿವಿ ಬಿತ್ತರಿಸಿತ್ತು.ಈ ಹಿನ್ನಲೆಯಲ್ಲಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ ಪವರ್ ಟಿವಿ ಇನ್ನಷ್ಟು ಅಭಿವೃದ್ದಿಯಾಗಲಿ ಹಾಗು ಕಲ್ಲುಗಣಿಗಾರಿಕೆಯ ಅವಾಂತರ ತಪ್ಪಲಿ ಅಂತ ಚಂಡಿಯಾಗ ಹಾಗು ರುದ್ರಹೊಮ ಮಾಡೋ ಮೂಲಕ ಪವರ್ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ

Exit mobile version