Site icon PowerTV

ಪಿಯು ವಿದ್ಯಾರ್ಥಿಗಳಿಗೆ ಶಾಕ್ – ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗೆ ಕೊರೋನಾ ಸೋಂಕು ?

ಬೆಂಗಳೂರು : ನಿನ್ನೆಯಷ್ಟೆ ಪಿಯುಸಿ ವಿದ್ಯಾರ್ಥಿಗಳು  ಕೊನೆಯ ಪರೀಕ್ಷೆ ಮುಗಿಸಿ ನಿಟ್ಟುಸಿರು ಬಿಟ್ಟಿದ್ದರು.  ಆದ್ರೆ ಸರ್ಕಾರ ಮಾಡಿರುವ ಯಡವಟ್ಟಿನಿಂದ ಪರೀಕ್ಷೆ ಬರೆದು ಮನೆಗೆ ತೆರಳಿದ್ದ ವಿದ್ಯಾರ್ಥಿಗಳಿಗೆ  ಆತಂಕಕಾರಿ ವಿಷಯವೊಂದಿದೆ. ನಿನ್ನೆ ಪಿಯುಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಕೊರೋನಾ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ.

ಜಯನಗರದ 4ನೇ ಬ್ಲಾಕ್​​ನ ಪರೀಕ್ಷಾ ಕೇಂದ್ರದಲ್ಲಿ ಹೋಂ ಕ್ವಾರಂಟೀನ್​​ನಲ್ಲಿದ್ದ ವಿದ್ಯಾರ್ಥಿನಿ ಸರ್ಕಾರದ ಕಣ್ಣು ತಪ್ಪಿಸಿ ಪರೀಕ್ಷೆ ಬರೆದಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಪರೀಕ್ಷಾ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಕೊರೋನಾ ಆತಂಕ ಹೆಚ್ಚಾಗಿದೆ.  ಇನ್ನು ಪಿಯುಸಿ ಪರೀಕ್ಷೆಯಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇವೆ ಅಂತಾ ಸರ್ಕಾರ ಹೇಳಿದ್ರೂ ನಿರ್ಲಕ್ಷ್ಯ ತೋರಿಸಿದೆ . ಈ ನಿರ್ಲಕ್ಷ್ಯದಿಂದ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ.   ಇನ್ನೇನು ಕೆಲವೇ ದಿನಗಳಲ್ಲಿ  SSLC  ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಅಲ್ಲಿಯೂ ಇಂತಹದ್ದೆ ಎಡವಟ್ಟಾದರೆ ಕಥೆ ಏನು? ಎಂಬ ದೊಡ್ಡ ಪ್ರಶ್ನೆ ಎದುರಾಗಿದೆ.

Exit mobile version