Site icon PowerTV

ಚಿಕ್ಕಮಗಳೂರು ಗ್ರಾಮಸ್ಥರಲ್ಲಿ ಹೆಚ್ಚಿದ  ಮೊಸಳೆ ಭಯ..!

ಚಿಕ್ಕಮಗಳೂರು  : ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಏರಿದ ಪರಿಣಾಮ ಮೊಸಳೆಯೊಂದು ನಿತ್ಯವೂ ಬಂಡೆಗಲ್ಲಿನ ಮೇಲೆ ಬಂದು ಬಿಸಿಲು ಕಾಯಿಸುತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್ಆರ್ ಪುರ ತಾಲೂಕಿನ ಬಾಳೆಹೊನ್ನೂರು ಭದ್ರಾನದಿ ಬಳಿ ನಡೆದಿದೆ.

ಕಳೆದ ಒಂದು ವಾರದಿಂದ ಮಲೆನಾಡಿನಲ್ಲಿ ಮುಂಗಾರು ಚುರುಕುಗೊಂಡಿದೆ. ಹಿನ್ನೆಲೆ ಭದ್ರಾ ನದಿಯ ನೀರಿನ ಮಟ್ಟದಲ್ಲಿ ಕೊಂಚ ಏರಿದ ಪರಿಣಾಮ ಮೊಸಳೆಯೊಂದು ಬಾಳೆಹೊನ್ನೂರು ಬಳಿಯ ಭದ್ರಾ ನದಿಯ ಭೈರೇದೇವರು ಬಳಿ ಬಂಡೆಕಲ್ಲಿನ ಮೇಲೆ ಮಲಗಿ ಜನರಲ್ಲಿ ಆತಂಕ ಸೃಷ್ಟಿಸಿದೆ. ನದಿ ಬಳಿಯ ಬಂಡೆಕಲ್ಲಿನ ಮೇಲೆ ಮಲಗಿದ್ದ ಮೊಸಳೆಯ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು ಎಲ್ಲೆಡೆ ವೈರಲ್ ಆಗಿದೆ. ಇದರಿಂದ ನದಿ ದಡದ ಗ್ರಾಮದ ಜನರಲ್ಲಿ ಮೋಸಳೆ ಭೀತಿ ಎದುರಾಗಿದೆ. ಸ್ಥಳೀಯ ಅರಣ್ಯ ಇಲಾಖೆಗೆ ಜನರು ಮಾಹಿತಿ ನೀಡಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದಲೂ ಈ ಭಾಗದಲ್ಲಿ ಮೊಸಳೆಗಳು ಇವೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಭದ್ರಾ ನದಿಗೆ ಮಾಂಸದ ತ್ಯಾಜ್ಯವನ್ನು ಹಾಕುತ್ತಿರುವುದರಿಂದ ಮೊಸಳೆಗಳು ತಿನ್ನಲು ದಡಕ್ಕೆ ಬರುತ್ತಿವೆ ಎಂದು ಜನರು ಆರೋಪಿಸಿದ್ದಾರೆ…

Exit mobile version