Site icon PowerTV

ಕಂಡಕ್ಟರ್ ಗೆ ಕೊರೋನಾ ಸೋಂಕು, ಬಸ್ ಹತ್ತಲು ಪ್ರಯಾಣಿಕರ ಹಿಂದೇಟು!

ಬೆಂಗಳೂರು : ಕೊರೋನಾ ಮಹಾ ಮಾರಿ ಯಾರನ್ನು ಬಿಡುತ್ತಿಲ್ಲ. ಇದೀಗ BMTC ಕಂಡೆಕ್ಟರ್ ಗೂ ಕೊರೋನಾ ಸೋಂಕು ತಗುಲಿದ್ದು ಬಸ್ ಹತ್ತಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ.

ನಿನ್ನೆ BMTC ಕಂಡೆಕ್ಟರ್ ಗೆ ಕೊರೋನಾ ಪಾಸಿಟೀವ್ ಕಾಣಿಸಿಕೊಂಡಿತ್ತು, ಇದೇ ಹಿನ್ನಲೆಯಲ್ಲಿ ಇಂದು ಬೆಳಗ್ಗೆ BMTC  ಹತ್ತಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ. ಲಾಕ್‌ಡೌನ್‌ ಮುಗಿದ ಬಳಿಕ ಬಸ್‌ ಹತ್ತಲು ಪ್ರಯಾಣಿಕರು ಅಷ್ಟಾಗಿ ಬರುತ್ತಿರಲಿಲ್ಲ ಆದ್ರೆ ಜನರಲ್ಲಿ ವಿಶ್ವಾಸ ಮೂಡಿಸಿದ ಬಳಿಕ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿತ್ತು. ಇದೀಗ ಮತ್ತೆ ಕಂಡೆಕ್ಟರ್ ಗೆ ಕೊರೋನಾ ಪಾಸಿಟೀವ್ ಬಂದಿರುವ ಕಾರಣ ಜನರು ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ.

Exit mobile version