Site icon PowerTV

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತ ಆತ್ಮಹತ್ಯೆ!

ಬೆಂಗಳೂರು : ಕೊರೋನಾ ಪರೀಕ್ಷೆ ವೇಳೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನಾಗರಬಾವಿ ಸರ್ಕಲ್ ಫ್ಲೈ ಓವರ್ ಬಳಿ ನಡೆದಿದೆ.

40 ವರ್ಷದ ವ್ಯಕ್ತಿಗೆ ಕೊರೋನಾ ಪರೀಕ್ಷಿಸಿದಾಗ ವ್ಯಕ್ರಿಗೆ ಸೋಂಕು ದೃಢವಾಗಿತ್ತು. ಇದರಿಂದ ಮನನೊಂದ ವ್ಯಕ್ತಿ ಫ್ಲೈ ಓವರ್ ನಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ಧಾನೆ. ಇನ್ನು ಫ್ಲೈ ಓವರ್​​ನಿಂದ ಬಿದ್ದ ಬಳಿಕ ಸ್ಥಳೀಯರು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತದನಂತರ ಅವನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಸದ್ಯ ವ್ಯಕ್ತಿ ವೃತಪಟ್ಟಿದ್ದು ಶಿಫ್ಟ್ ಮಾಡಿದ್ದ ಪೊಲೀಸರಿಗೆ ಕ್ವಾರಂಟೀನ್ ಮಾಡುವ​​​​​​​​ ಸಾಧ್ಯತೆ ಇದೆ.

Exit mobile version