Site icon PowerTV

ಮಾಸ್ಕ್ ಧರಿಸದೇ ಮನೆಯಿಂದ ಹೊರಗೆ ಬಂದ್ರೆ ಬೀಳುತ್ತೆ ಫೈನ್!

ಮೈಸೂರು: ರಾಜ್ಯಾದ್ಯಂತ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಾರ್ವಜನಿಕರಲ್ಲಿ ಇದರ ಬಗ್ಗೆ ಎಷ್ಟು ಬಾರಿ ಮುಂಜಾಗ್ರತೆ ವಹಿಸುವಂತೆ ಕೇಳಿಕೊಂಡರೂ ಯಾರೂ ಕೇಳುತ್ತಿಲ್ಲ. ಇದೀಗ ಮೈಸೂರಲ್ಲಿ ಕೊರೋನಾ ಬಗ್ಗೆ ಜಾಗೃತಿ ವಹಿಸದೆ ಮಾಸ್ಕ್ ಧರಿಸದೆ ಹೊರಬಂದ್ರೆ ದಂಡ ಕಟ್ಟಬೇಕಾಗುತ್ತದೆ.

ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿದ್ದು, ಮೈಸೂರಿನಲ್ಲಿ ಮಾಸ್ಕ್ ಹಾಕದೆ ಹೊರಬರುವಂತಿಲ್ಲ. ಒಂದು ವೇಳೆ ನಿಯಮ ಪಾಲಿಸದೆ ಓಡಾಡಿದರೆ ದಂಡ ಕಟ್ಟಬೇಕು. ಈ ಬಗ್ಗೆ ಕಳೆದ ನಾಲ್ಕು ದಿನಗಳಿಂದ  ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಮಾಸ್ಕ್ ಧರಿಸದೆ ಇರುವುದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಸ್ಥಳದಲ್ಲೇ ದಂಡ ವಸೂಲಿ ಮಾಡುತ್ತಿದ್ದಾರೆ. ನಿಯಮ ಜಾರಿಯಾದ ಬಳಿಕ ಅಧಿಕಾರಿಗಳು ಸಾರ್ವಜನಿಕರಿಂದ ಇಲ್ಲಿವರೆಗೆ ಒಟ್ಟು 16,700 ರೂ ವಸೂಲಿ ಮಾಡಿದ್ದಾರೆ. 

Exit mobile version