Site icon PowerTV

ಇದು ಜಮೀರ್ ಅಹ್ಮದ್ ಸರ್ಕಾರವಲ್ಲ : ಬಸವರಾಜ್ ಬೊಮ್ಮಾಯಿ

ಬೆಂಗಳೂರು: ಪಾದರಾಯನಪುರ ಗಲಭೆ ಬಗ್ಗೆ ಜಮೀರ್ ಅಹ್ಮದ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಧಿಕಾರಿಗಳು ಯಾವಾಗ ಬರಬೇಕು ಎಂಬುದನ್ನು ಜಮೀರ್ ಅಹ್ಮದ್ ಅವರೊಂದಿಗೆ ಕೇಳಿ ಮಾಡಬೇಕಿಲ್ಲ ಎಂದು ಅವರ ವಿರುದ್ಧ ಕಿಡಿ ಕಾರಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿರುವ ಅವರು, ‘ಇದು ಶಾಸಕರು ಜಮೀರ್ ಅಹ್ಮದ್​ ಅವರ ಸರ್ಕಾರವಲ್ಲ. ಅಧಿಕಾರಿಗಳಿಗೆ ಯಾವಾಗ ಬರಬೇಕು? ಯಾವಾಗ ಹೋಗಬೇಕು ಎಂಬುದನ್ನು ಜಮೀರ್ ಅವರನ್ನು ಕೇಳಿ ಮಾಡಬೇಕಿಲ್ಲ. ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡುವುದಿಲ್ಲ. ಈಗ ಬಂಧಿಸಿರುವವರ ಜೊತೆ ಮತ್ತೊಂದಿಷ್ಟು ಆರೋಪಿಗಳನ್ನು ಬಂಧಿಸಲಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ‘ ಎಂದು ಹೇಳಿದ್ದಾರೆ.

Exit mobile version