Site icon PowerTV

ಕೊರೋನಾ ಭೀತಿಯಿಂದ IPL 2020 ರದ್ದಾಗುತ್ತಾ? ಈ ಬಗ್ಗೆ ಮೌನ ಮುರಿದ ಗಂಗೂಲಿ ಹೇಳಿದ್ದೇನು?

ಇಡೀ ದೇಶದಲ್ಲಿ ಕೊರೋನಾ ಭೀತಿ ಆವರಿಸಿದೆ. ನಮ್ಮಲ್ಲಿ 28 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೊರೋನಾ ಭೀತಿಯಿಂದ IPL -2020 ನಡೆಯೋದು ಅನುಮಾನ ಎಂಬ ಆತಂಕ ಕೂಡ ಕಾಡ ತೊಡಗಿದೆ.
ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೌನ ಮುರಿದಿದ್ದಾರೆ. ಐಪಿಎಲ್ ಪೂರ್ವ ನಿಗದಿಯಾಗಿರುವ ವೇಳಾಪಟ್ಟಿಯಂತೆ ನಡೆಯುತ್ತದೆ. ಕೊರೋನಾ ವೈರಸ್ ಹರರಡದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿ ಅನುಸಾರ IPL ನಡೆಯುತ್ತದೆ. ಆಟಗಾರರು ಅಭಿಮಾನಿಗಳ ಜೊತೆ ಕೈಕುಲುಕದಂತೆ, ಆಟಗಾರರು ತಂಗುವ ಹೊಟೆಲ್‌, ಕ್ರೀಡಾಂಗಣದಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Exit mobile version