Site icon PowerTV

ಹ್ಯಾಟ್ರಿಕ್ ಗೆಲುವು ಪಡೆದ ಕೇಜ್ರಿವಾಲ್​​ಗೆ ಹೆಚ್​ಡಿಡಿ ಬರೆದ ಪತ್ರದಲ್ಲಿ ಏನಿದೆ?

ಬೆಂಗಳೂರು : ಆಮ್ ಆದ್ಮಿ ಪಾರ್ಟಿ ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಪ್ರಚಂಡ ಗೆಲುವನ್ನು ಪಡೆದಿದೆ. ಹ್ಯಾಟ್ರಿಕ್ ಜಯದ ಖುಷಿಯಲ್ಲಿರೋ ಅರವಿಂದ್ ಕೇಜ್ರಿವಾಲ್ ಮತ್ತೆ ದೆಹಲಿಯಲ್ಲಿ ಸರ್ಕಾರ ರಚಿಸುವ ಸಂತಸದಲ್ಲಿದ್ದಾರೆ. ದಿಲ್ಲಿ ಜನರ ದಿಲ್ ಗೆದ್ದ ಕೇಜ್ರಿವಾಲ್​ಗೆ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ್ರು ಕೂಡ ವಿಶ್ ಮಾಡಿದ್ದಾರೆ. ಪತ್ರ ಬರೆದಿರೋ ಗೌಡ್ರು, ಕೇಜ್ರಿವಾಲ್​ ಅಭಿವೃದ್ಧಿ ಕೆಲಸಗಳನ್ನು ಶ್ಲಾಘಿಸಿದ್ದಾರೆ.
”ಪ್ರೀತಿಯ ಅರವಿಂದ್​ ಕೇಜ್ರಿವಾಲ್​​ ಜೀ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಗೆಲುವು ಸಾಧಿಸಿರೋ ನಿಮ್ಗೆ ಹೃತ್ಪೂರ್ವಕವಾದ ಅಭಿನಂದನೆಗಳು. ನೀವು ಈ ಗೆಲುವಿಗೆ ಅರ್ಹರಾಗಿದ್ದೀರಿ. ಅಭಿವೃದ್ಧಿಗೆ ನೀವು ಕೊಟ್ಟ ಮಹತ್ವಕ್ಕೆ ತಕ್ಕದಾದ ಫಲಿತಾಂಶ ಬಂದಿದೆ. ಈ ಗೆಲುವಿನಿಂದ ಕೋಮುವಿಭಜನೆ ಪ್ರಯತ್ನಕ್ಕೆ ಇಲ್ಲಿ ಜಾಗವಿಲ್ಲವೆಂದು ಭರವಸೆ ಸಿಕ್ಕಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ನಿಮ್ಮ ಸರ್ಕಾರ ಮಾಡಿರೋ ಒಳ್ಳೆಯ ಕೆಲಸಗಳ ಮಾತುಗಳು ಕರ್ನಾಟಕ ಮತ್ತು ಇಡೀ ಭಾರತದೆಲ್ಲೆಡೆ ತಲುಪಿವೆ. ಹೊಸ ಹುರುಪಿನೊಂದಿಗೆ ದೆಹಲಿ ಜನರ ಸೇವೆಯನ್ನು ಮುಂದುವರೆಸಲು ದೇವ್ರು ನಿಮ್ಗೆ ಒಳ್ಳೆಯ ಆರೋಗ್ಯ ಕೊಡ್ಲಿ ಅಂತ ಹಾರೈಸ್ತೀನಿ” ಅಂತ ಶುಭಹಾರೈಸಿದ್ದಾರೆ.

Exit mobile version