Site icon PowerTV

ಸಿ.ಸಿ ಪಾಟೀಲ್ ಅವರನ್ನು ಬಲಿಕೊಟ್ಟು ಸಚಿವನಾಗಲು ಬಯಸೋದಿಲ್ಲ : ಯತ್ನಾಳ್

ವಿಜಯಪುರ: ‘ನಾನು ಸಿ.ಸಿ ಪಾಟೀಲ್ ಅವರನ್ನು ಬಲಿಕೊಟ್ಟು ಸಚಿವನಾಗಲು ಬಯಸೋದಿಲ್ಲ‘ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕೆಲವರು ಹಲವು ವರ್ಷಗಳಿಂದ ಕುರ್ಚಿ ಅನುಭವಿಸಿ ಲಾಭ ಪಡೆದುಕೊಂಡಿದ್ದಾರೆ. ಹಾಗಾಗಿ ಅವರು ಕುರ್ಚಿ ಬಿಡಲಿ. ಇನ್ನು ಪಕ್ಷ ನನಗೆ ಅಧಿಕಾರ ನೀಡಲು ಬಯಸಿದರೆ ನನಗೆ ಕ್ಯಾಬಿನೆಟ್ ಸ್ಥಾನವನ್ನೇ ನೀಡಲಿ ಇಲ್ಲವಾದರೆ ನಾನು ಮಂತ್ರಿಯಾಗಿಯೇ ಮುಂದುವರಿಯುತ್ತೇನೆ. ಅಷ್ಟೆ ಅಲ್ಲ ಸಚಿವರ ಕಾರ್ಯವೈಖರಿ ಬಗ್ಗೆ ಮೂರು ತಿಂಗಳಿಗೊಮ್ಮೆ ಮೌಲ್ಯಮಾಪನ ಮಾಡಬೇಕು. ಇಲ್ಲದಿದ್ದರೆ ಕೆಲವು ಸಚಿವರು ವಿಧಾನಸೌಧಕ್ಕೆ ಮಾತ್ರ ಸೀಮಿತವಾಗಿದ್ದು, ಕೇವಲ ಗೂಟದ ಕಾರು, ಗನ್ ಮ್ಯಾನ್‌ ಇಟ್ಟು ಕೊಂಡಂತಾಗುತ್ತೆ ಎಂದಿದ್ದಾರೆ.

ರಮೇಶ್ ಜಾರಕಿಹೊಳಿ ಅವರಿಗೆ ಡಿಸಿಎಂ ನೀಡಬೇಕೆಂಬುದು ಸಹಜ ಬಯಕೆ. ಡಿಸಿಎಂ ಸ್ಥಾನಗಳ ಸಂಖ್ಯೆ ಹೆಚ್ಚಿಸುವುದರಿಂದ ಗೌರವ ಕಡಿಮೆಯಾಗುತ್ತದೆ ಅನ್ನೋದು ನನ್ನ ವೈಯಕ್ತಿಕ ಭಾವನೆ ಎಂದರು.

Exit mobile version