Site icon PowerTV

“ರಾಹುಲ್​​ ಬಾಬಾ CAA ಕಾನೂನನ್ನು ಇಟಾಲಿಯನ್ ಭಾಷೆಗೆ ಅನುವಾದಿಸಿ ಕೊಡ್ತೀನಿ” : ಅಮಿತ್ ಶಾ

ಜೋಧ್​​ಪುರ್ : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಗೃಹಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿಗೆ ನೇರಾನೇರ ಸವಾಲೆಸೆದಿದ್ದಾರೆ.
ರಾಜಸ್ಥಾನದ ಜೋಧ್​ಪುರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ರಾಹುಲ್ ಬಾಬಾ ನೀವು ಕಾನೂನು ಓದಿದ್ದರೆ ಸಿಎಎ ಬಗ್ಗೆ ಎಲ್ಲಿ ಬೇಕಾದ್ರೂ ಚರ್ಚೆ ನಡೆಸಲು ಸಿದ್ಧನಿದ್ದೇನೆ. ಒಂದ್ ವೇಳೆ ಕಾನೂನು ಓದಲು ಬರದಿದ್ದರೆ ಇದ್ರೆ ನಾನು ನಿಮ್ಗೆ ಸಹಾಯ ಮಾಡ್ತೀನಿ. ಸಿಎಎಯನ್ನು ಇಟಾಲಿಯನ್ ಭಾಷೆಗೆ ಅನುವಾದಿಸಿ ಕೊಡ್ತೀನಿ” ಎಂದು ಛಾಟಿ ಬೀಸಿದರು.
ಪೌರತ್ವ ಕಾಯ್ದೆ ದೇಶದ ಯಾವೊಬ್ಬ ನಾಗರಿಕರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಬದಲಾಗಿ ಪೌರತ್ವ ನೀಡುತ್ತದೆ. ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ 2015ಕ್ಕೂ ಮುನ್ನ ನೆರೆಯ ಮೂರು ಮುಸ್ಲಿಂ ರಾಷ್ಟ್ರಗಳಿಂದ ಮುಸ್ಲಿಮೇತರರು ಭಾರತಕ್ಕೆ ಬಂದಿದ್ದಾರೆ. ಅಂತಹ ನಿರಾಶ್ರಿತರಿಗೆ ಪೌರತ್ವ ನೀಡಲು ಈ ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಆದರೆ  ವಿರೋಧ ಪಕ್ಷಗಳು ಕಾಯ್ದೆ ಬಗ್ಗೆ ಅಪಪ್ರಚಾರ ನಡೆಸುತ್ತಿವೆ. ಆದರೆ, ಎಷ್ಟೇ ವಿರೋಧ ಬರಲಿ , ಎಷ್ಟೇ ಅಡೆತಡೆ ಬರಲಿ  ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. 

Exit mobile version