Site icon PowerTV

ಪವರ್ ಟಿವಿಯಲ್ಲಿ ಮಾತ್ರ KSPLನ ಕ್ಷಣ-ಕ್ಷಣದ ಅಪ್​ಡೇಟ್ಸ್​

ಕಿಚ್ಚ ಸುದೀಪ್ ಬ್ಯಾಟ್ ಹಿಡಿದು ಸಿಸಿಎಲ್ , ಕೆಪಿಎಲ್  ಹಾಗೂ ಕನ್ನಡ ಚಲನಚಿತ್ರ ಕಪ್ ಗಳಲ್ಲಿ ಅಬ್ಬರಿಸಿದ್ದರು . ಈಗ ಬ್ಯಾಟ್ ಹಿಡಿದು ಫೀಲ್ಡಿಗಿಳಿಯೋಕೆ ರೆಡಿಯಾಗಿರೋದು ಕಿಚ್ಚನ ಅಭಿಮಾನಿಗಳು.

ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗ ಹಾಗೂ ಪವರ್ ಟಿವಿಯ ಮಾಧ್ಯಮ ಸಹಭಾಗಿತ್ವದಲ್ಲಿ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ ಅನ್ನೋ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಇದು ಮೊದಲ ಬಾರಿ ನಡೆಯುತ್ತಿರುವ ವೈಭವದ ಟೂರ್ನಿಯಾಗಿದ್ದು,  ಜನವರಿ 4 ಮತ್ತು 5ರಂದು ನೆಲಮಂಗಲದ ಗ್ಲೋಬಲ್ ಸ್ಪೋರ್ಟ್ಸ್ ಗ್ರೌಂಡ್​ ಕೆಎಸ್​​ಪಿಲ್​​ಗೆ ಸಾಕ್ಷಿಯಾಗುತ್ತಿದೆ. 

 ವಿಶೇಷ ಅಂದ್ರೆ ಕರ್ನಾಟಕಾದ್ಯಂತ ಇರುವ ಕಿಚ್ಚ ಸುದೀಪ್ ಅಭಿಮಾನಿಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 16 ತಂಡಗಳು ಈ ಟೂರ್ನಿಯಲ್ಲಿ ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.  ಅಲ್ಲದೆ  ಮಹಿಳಾ ಅಭಿಮಾನಿಗಳಿಗಾಗಿ ಒಂದು ವಿಶೇಷ ಪಂದ್ಯವನ್ನು ಏರ್ಪಡಿಸಲಾಗಿದೆ. ಈ ಟೂರ್ನಿಯ ಕ್ಷಣ ಕ್ಷಣದ ಅಪ್ ಡೇಟ್ಸ್ ನಿಮ್ಮ ಪವರ್ ಟಿವಿಯಲ್ಲಿ ಮಾತ್ರ ದೊರೆಯಲಿದೆ.

Exit mobile version