Site icon PowerTV

ಕರ್ನಾಟಕದಲ್ಲಿ EWS ಜಾರಿಗೊಳಿಸುವಂತೆ ಸಿಎಂಗೆ ಸುರೇಶ್​​ ಕುಮಾರ್ ಪತ್ರ

ಬೆಂಗಳೂರು : ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದ ಜನರಿಗೆ ಶೇ.10 ರಷ್ಟು ಮೀಸಲಾತಿ ಕೊಟ್ಟಿರುವ ನರೇಂದ್ರ ಮೋದಿ ಸರ್ಕಾರದ EWS (Economically Weaker Section) ಯೋಜನೆಯನ್ನು ರಾಜ್ಯದಲ್ಲಿಯೂ ಜಾರಿಗೊಳಿಸುವಂತೆ ಸಚಿವ ಸುರೇಶ ಕುಮಾರ್ ಮನವಿ ಮಾಡಿದ್ದಾರೆ.

EWS ಜಾರಿಗೆ ತರುವಂತೆ ಪ್ರೌಢ ಶಾಲಾ ಶಿಕ್ಷಣ ಮತ್ತು ಕಾರ್ಮಿಕ ಸಚಿವರು ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿ, ಮುಂಬರುವ ಅಧಿವೇಶನದಲ್ಲಿ ಕಾಯ್ದೆ ಜಾರಿಗೆ ಸಂಬಂಧ ಮಸೂದೆ ಮಂಡಿಸಬೇಕು ಅಂತ ಪತ್ರದಲ್ಲಿ ಮನವಿ ಸಲ್ಲಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ರಾಜ್ಯದಲ್ಲೂ ಕಾಯ್ದೆ ಜಾರಿಯಾಗೋ ಎಲ್ಲ ಲಕ್ಷಣಗಳು ಇದೆ. ಆರ್ಥಿಕವಾಗಿ ಹಿಂದುಳಿದಿರುವ ಸಾಮಾನ್ಯ ವರ್ಗದ ಜನರಿಗೆ ಈ ಕಾಯ್ದೆಯಿಂದ ಅನೂಕೂಲವಾಗಲಿದ್ದು ಕಾಯ್ದೆ ಯಾವಾಗ ಜಾರಿಯಾಗತ್ತೊ ಕಾದು ನೋಡಬೇಕಿದೆ.

Exit mobile version