Site icon PowerTV

`ಝೀರೋ ಟ್ರಾಫಿಕ್ ಮಂತ್ರಿಯಾಗಿದ್ದ ಪರಮೇಶ್ವರ್ ಹಿಂದೆ -ಮುಂದೆ ನೊಣ ಹೊಡೆಯೋರೇ ಇಲ್ಲ’ : ರಾಜಣ್ಣ ವ್ಯಂಗ್ಯ

ತುಮಕೂರು : `ಝೀರೋ ಟ್ರಾಫಿಕ್ ಮಂತ್ರಿಯಾಗಿದ್ದ ಪರಮೇಶ್ವರ್ ಹಿಂದೆ -ಮುಂದೆ ನೊಣ ಹೊಡೆಯೋರೇ ಇಲ್ಲ’ ಅಂತ ಮಾಜಿ ಶಾಸಕ ಕೆ.ಎನ್ ರಾಜಣ್ಣ ವ್ಯಂಗ್ಯವಾಡಿದ್ದಾರೆ.
ಕೊರಟಗೆರೆ ತಾಲೂಕಿನ ಎಲೆರಾಮ್​ಪುರದಲ್ಲಿ ನಡೆದ ಡಿಸಿಸಿ ಬ್ಯಾಂಕ್​​ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆ ಪುಣ್ಯಾತ್ಮನಿಗೆ ಕಷ್ಟದಲ್ಲಿದ್ದಾಗ ಸಹಾಯ ಮಾಡಿದೆ. ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದೆ. ಆತ ಗೆದ್ದು ಡಿಸಿಎಂ ಆದ, ಝೀರೋ ಟ್ರಾಫಿಕ್ ಮಂತ್ರಿಯಾದ. ಹಿಂದೆ – ಮುಂದೆ ಪೊಲೀಸರನ್ನು ಇಟ್ಟುಕೊಂಡ. ಈಗ ಹೇಗಾಗಿದೆ ಪರಿಸ್ಥಿತಿ? ಪೊಲೀಸರು ಹಿಂದೂ ಇಲ್ಲ – ಮುಂದೂ ಇಲ್ಲ..! ನೊಣ ಹೊಡೆಯೋರೇ ಇಲ್ಲವೆಂದು ಕುಟುಕಿದರು.
ಇನ್ನು ಕಾಂಗ್ರೆಸ್​ ವಿರುದ್ಧವೂ ಕಿಡಿಕಾರಿದ ಅವರು, ಕಾಂಗ್ರೆಸ್ಸಲ್ಲಿ ಕೆಲವು ಲೂಟಿಕೋರರು ಇದ್ದಾರೆ. ಸಿದ್ದರಾಮಯ್ಯರ ಅನ್ನಭಾಗ್ಯ ಯೋಜನೆ ಹೆಸರು ಹೇಳಲ್ಲ. ಸಿದ್ದರಾಮಯ್ಯ ಹೆಸರು ಎಲ್ಲಿ ಮುಂದೆ ಬರುತ್ತೋ ಅನ್ನೋ ಭಯ ಅವರದ್ದು. ಹಾಗಾಗಿ ಯಾವ್ದೇ ಕಾರ್ಯಕ್ರಮದಲ್ಲೂ ಅನ್ನಭಾಗ್ಯದ ಹೆಸರು ಹೇಳಲ್ಲ ಅಂತ ವಾಗ್ದಾಳಿ ನಡೆಸಿದರು.

Exit mobile version