Site icon PowerTV

ಹೊಸ ವರ್ಷಕ್ಕೆ ಮೆಟ್ರೋ ಭರ್ಜರಿ ಗಿಫ್ಟ್..!

ಬೆಂಗಳೂರು : ನಗರದ ಮೆಟ್ರೋ ಪ್ರಯಾಣಿಕರಿಗೆ  ಗುಡ್ ನ್ಯೂಸ್ ಒಂದು ಸಿಕ್ಕಿದೆ. ನಮ್ಮ ಮೆಟ್ರೋ ಸೇವೆಯನ್ನೆ ನೆಚ್ಚಿಕೊಂಡಿದ್ದ ಪ್ರಯಾಣಿಕರಿಗೆ ಬಿ.ಎಂ.ಆರ್.ಸಿ.ಲ್. ಸಮಯವನ್ನು ವಿಸ್ತರಿಸುವ ಮೂಲಕ ಸಿಹಿ ಸುದ್ದಿಯನ್ನು ನೀಡಿದೆ.  ಜನವರಿ 1 ರಿಂದ ತನ್ನ ಕೊನೆಯ ಮೆಟ್ರೋ ಸೇವಾ ಅವಧಿಯನ್ನು ಹೆಚ್ಚಿಸಿದೆ. ಇನ್ನು ಮುಂದೆ ರಾತ್ರಿ 12ರವರೆಗೆ ನಮ್ಮ ಮೆಟ್ರೋ ನಗರದ ನಾಲ್ಕು ದಿಕ್ಕುಗಳಲ್ಲಿಯೂ ಸಂಚರಿಸಲಿದೆ.

ಮೈಸೂರು ರಸ್ತೆಯಿಂದ 11.05ಕ್ಕೆ ಹೊರಡುತ್ತಿದ್ದ ಕೊನೆಯ ಮೆಟ್ರೋ ರೈಲು ,ಜನವರಿ 1ರ ಬಳಿಕ ರಾತ್ರಿ 11.40ಕ್ಕೆ ಹೊರಡಲಿದೆ. ಬೈಯಪ್ಪನಹಳ್ಳಿಯಲ್ಲಿ 11 ಗಂಟೆಗೆ ಹೊರಡುತ್ತಿದ್ದ ಕೊನೆಯ ರೈಲು, ರಾತ್ರಿ 11.35ಕ್ಕೆ ಹೊರಡಲಿದೆ. ಇನ್ನು ನಮ್ಮ ಮೆಟ್ರೋದ ಸೇವಾ ಅವಧಿ ವಿಸ್ತರಣೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ,ಜೊತೆಗೆ ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ಉದ್ಯೋಗಿಗಳಿಗೆ  ಇದು ಸಹಕರಿಯಾಗಲಿದೆ.

Exit mobile version