Site icon PowerTV

ತಿರುಕನ ಕನಸು ಕಾಣುತ್ತಿರುವ ಕಾಂಗ್ರೆಸ್: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಕಾಂಗ್ರೆಸ್​ನವರು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸ್ತಿದ್ದಾರೆ. ಮೊನ್ನೆ ತಾನೆ ನಡೆದಿರುವ ಉಪಚುನಾವಣೆಯ ಫಲಿತಾಂಶ ಬರುವ ಮುನ್ನವೇ ಕಾಂಗ್ರೆಸ್ ಅಧಿಕಾರದ  ಕನಸು ಕಾಣುತ್ತಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸಾಂಸ್ಥಿಕ ಚುನಾವಣಾ ವೀಕ್ಷಕರ ಸಭೆಯಲ್ಲಿ ಮಾತನಾಡಿದ  ಸಚಿವ ಜಗದೀಶ್, ಸಿದ್ದರಾಮಯ್ಯ ಮಾಡಿರುವ ಯೋಜನೆಗಳು ಯಾವುದೂ ಜನ ಸಾಮಾನ್ಯರಿಗೆ ತಲುಪಿಲ್ಲ. ಅಷ್ಟೇ ಅಲ್ಲ ಸಿದ್ದರಾಮಯ್ಯನವರಿಗೆ ಜನರ ನಾಡಿಮಿಡಿತವೇ ಗೊತ್ತಿಲ್ಲ. ಆದರೂ ಈಗ ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅಹಂಕಾರ, ಹಮ್ಮು ಬಿಮ್ಮಿನಿಂದ ಮಾತಾಡುತ್ತಿದ್ದು, ಈಗ ಸಿದ್ದರಾಮಯ್ಯನವರ ನಾಯಕತ್ವ ಅಂತ್ಯಕಾಲಕ್ಕೆ ಬಂದಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

Exit mobile version