Site icon PowerTV

15 ಕ್ಷೇತ್ರಗಳಲ್ಲಿ ಉಪ ಸಮರ : ಅನರ್ಹರು ಮತ್ತು ಬಿಜೆಪಿ ಸರಕಾರದ ಭವಿಷ್ಯ ಮತದಾರರ ಕೈಯಲ್ಲಿ

ಅನರ್ಹ ಶಾಸಕರು ಮತ್ತು ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧಾರದ ಮತಹಬ್ಬ ಜೋರಾಗಿದೆ. ಸ್ಪೀಕರ್ ಮಾತ್ರವಲ್ಲದೆ ಸುಪ್ರೀಂಕೋರ್ಟಿನಿಂದಲೂ ‘ಅನರ್ಹತೆ’ ಶಿಕ್ಷೆಗೆ ಗುರಿಯಾಗಿರುವ 17 ಮಂದಿಯಲ್ಲಿ 15 ಮಂದಿಯ ಭವಿಷ್ಯ ಪ್ರಜಾ ನ್ಯಾಯಾಲಯದಲ್ಲಿದ್ದು, ಇಂದು ಮತದಾರರು ಹಣೆಬರಹ ಬರೆಯುತ್ತಿದ್ದಾರೆ.
ಮಹಾಲಕ್ಷ್ಮೀ ಲೇಔಟ್, ಕೆ.ಆರ್​ ಪುರಂ, ಶಿವಾಜಿ ನಗರ, ಯಶವಂತಪುರ, ಹೊಸಕೋಟೆ, ಚಿಕ್ಕಬಳ್ಳಾಪುರ, ಕೆ.ಆರ್ ಪೇಟೆ, ಹುಣಸೂರು, ಯಲ್ಲಾಪುರ, ರಾಣೇಬೆನ್ನೂರು, ಹಿರೇಕೆರೂರು, ಅಥಣಿ, ಗೋಕಾಕ, ಕಾಗವಾಡ, ವಿಜಯನಗರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
ಒಟ್ಟು 165 ಅಭ್ಯರ್ಥಿಗಳು ಕಣದಲ್ಲಿದ್ದು, 37,82,681 ಮತದಾರರಿದ್ದಾರೆ. ಡಿಸೆಂಬರ್ 9ರಂದು ಫಲಿತಾಂಶ ಹೊರ ಬೀಳಲಿದೆ.

ಒಂದೇ ಕುಟುಂಬದ 110 ಮಂದಿ ಮತದಾನ!

Exit mobile version