Site icon PowerTV

ಬಾಂಗ್ಲಾ ವಲಸಿಗರಿಗೆ ಭೂಮಿ : ಮತ್ತೆ ವಿವಾದಲ್ಲಿ ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಅಕ್ರಮ ವಲಸಿಗರನ್ನು ತಡೆಯಲು ಕೇಂದ್ರ ಸರ್ಕಾರ ಎನ್ ಅರ್ ಸಿ ಜಾರಿಗೆ ಮುಂದಾಗುತ್ತಿರುವ ಬೆನ್ನಲ್ಲೇ ಬಾಂಗ್ಲಾ ವಲಸಿಗ ನಿರಾಶ್ರಿತರಿಗೆ ಭೂಮಿ ಹಕ್ಕು ನೀಡಲು ಪಶ್ಚಿಮ ಬಂಗಾಳದ ದೀದಿ ಸರ್ಕಾರ ಮುಂದಾಗಿದೆ.

ಅಕ್ರಮವಾಗಿ ನೆಲೆಸಿರುವ 94 ಕಾಲೋನಿಗಳನ್ನು ಅಧಿಕೃತಗೊಳಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಮಮತಾ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 

ರಾಜ್ಯದಲ್ಲಿ 1971ರಿಂದಲೂ ನಿರಾಶ್ರಿತರಿದ್ದಾರೆ ಅವರಿಗೂ ಬದುಕುವ ಹಕ್ಕನ್ನು ನೀಡಬೇಕಿದೆ ಎಂದು ನಿರಾಶ್ರಿತರಿಗೆ ಎಲ್ಲ ಹಕ್ಕನ್ನು ನೀಡಲು ಸರ್ಕಾರ ನಿರ್ಧರಿಸಿದ್ದು, ಇದರಿಂದ 3 ದಶಕಗಳ ನಿರಾಶ್ರಿತರ ಹೋರಾಟಕ್ಕೆ ತೆರೆ ಬೀಳಲಿದೆ. 

ಪಶ್ಚಿಮ ಬಂಗಾಳ ವಲಸಿಗರ ತಾಣ, ಭಯೊತ್ಪಾದನಾ ಚಟುವಟಿಕೆಗಳ ವೇದಿಯಾಗುತ್ತಿದೆ ಎನ್ನುವ ಕೇಂದ್ರ ಸರ್ಕಾರದ ಎಚ್ಚರಿಕೆಯನ್ನು ತಳ್ಳಿ ಹಾಕಿರುವ ಬ್ಯಾನರ್ಜಿ ಸರ್ಕಾರದ ಈ ನಿರ್ಧಾರ ವಿವಾದಕ್ಕೀಡಾಗಿದೆ. 

Exit mobile version