Site icon PowerTV

“ನಾನು ದುರ್ಯೋಧನ ,ಆದ್ರೆ ದುಶ್ಯಾಸನ ಅಲ್ಲ”..!

ಮೈಸೂರು: “ನಾನು ದುರ್ಯೋಧನ ಅನ್ನೋದನ್ನು ಒಪ್ಕೋತ್ತೀನಿ. ಆದ್ರೆ, ದುಶ್ಯಾಸನ ಅಲ್ವಲ್ಲಾ”? – ಇದು ಮಾಜಿ ಸಚಿವ ಸಾ.ರಾ ಮಹೇಶ್ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್​ ವಿಶ್ವನಾಥ್​​ಗೆ ತಿರುಗೇಟು ನೀಡಿದ ಪರಿ! 

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ವಿಶ್ವನಾಥ್​ ನನ್ನನ್ನು ದುರ್ಯೋಧನ ಅಂತ ಕರೆದಿದ್ದಾರೆ. ನಾನು ದುರ್ಯೋಧನನೇ.. ಅವನಿಗೂ ಒಂದಷ್ಟು ಒಳ್ಳೆಯ ಗುಣಗಳಿವೆ. ಪುಣ್ಯಕ್ಕೆ ದುಶ್ಯಾಸನ ಅಂತ ಕರೆದಿಲ್ಲ..! ಯಾರು ಭೀಮ ,ಯಾರು ದುರ್ಯೋಧನ ಅಂತ ಜನ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

ನಾವಿಬ್ಬರೂ ಅಣೆ ಪ್ರಮಾಣಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದೆ ತಪ್ಪು. ನಾನು ದೇವಸ್ಥಾನದ ಒಳಗೆ ಕುಳಿತಿದ್ದೆ ನಿಜ. ಒಂದು ವೇಳೆ ಹೊರಗಡೆ ಬಂದಿದ್ದರೆ ನನ್ನ ಜೊತೆ ನೂರಾರು ಕಾರ್ಯಕರ್ತರಿದ್ದರು. ಪರಿಸ್ಥಿತಿ ಒಂಚೂರು ಹೆಚ್ಚು-ಕಮ್ಮಿಯಾಗಿದ್ರೆ, ಏನ್ಮಾಡ್ಬೇಕಿತ್ತು? ಹೀಗಾಗಿ ಯಾರು ಪ್ರಾಮಾಣಿಕರು ಅಂತ ಜನ ಅರ್ಥ ಮಾಡಿಕೊಂಡಿದ್ದಾರೆ ಅಂದ್ರು. 

 

Exit mobile version