Site icon PowerTV

ಅಳಿಯ ಅಜಿತ್ ನಡೆಗೆ ಶರದ್ ಪವಾರ್ ಅಸಮಾಧಾನ…!

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಅಚ್ಚರಿ ಬೆಳವಣಿಗೆ ಎಂಬಂತೆ ಬಿಜೆಪಿ ಜೊತೆ ಎನ್ ಸಿ ಪಿ ಕೈ ಜೋಡಿಸುವ ಮೂಲಕ ಸರ್ಕಾರ ರಚನೆಗೆ ಮುಂದಾಗಿರುವುದು ಎಲ್ಲರ ಹುಬ್ಬೆರುವಂತೆ ಮಾಡಿದೆ. ಅಜಿತ್ ಅವರ ಈ ನಡೆ ಶಿವಸೇನಾಕ್ಕೆ ನುಂಗಲಾರದ ತುತ್ತಾಗಿದೆ.
ಹಲವಾರು ಮಹತ್ವದ ಸಭೆಗಳಲ್ಲಿ ಭಾಗವಹಿಸಿದ್ದ ಶರದ್ ಪವಾರ್ ಅವರ ಸೋದರ ಅಳಿಯ ಅಜಿತ್ ಪವಾರ್ ಇದ್ದಕ್ಕಿದ್ದಂತೆ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿರುವುದು ಶಿವಸೇನಾಕ್ಕೆ ಮಾರ್ಮಘಾತ ಉಂಟುಮಾಡಿದೆ. ಅಳಿಯನ ನಡೆಗೆ ಶರದ್ ಪವಾರ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ .
ಈ ಬಗ್ಗೆ ಟ್ವೀಟ್ ಮಾಡಿರುವ ಶರದ್ ಪವಾರ್ ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ರಚಿಸುವ ಅಜಿತ್ ಪವಾರ್ ನಿರ್ಧಾರ ವೈಯಕ್ತಿಕವಾದುದು ,ಇದಕ್ಕೂ ಎನ್ ಸಿ ಪಿಗೂ ಯಾವುದೇ ಸಂಬಂಧವಿಲ್ಲ. ಅವರ ನಿರ್ಧಾರವನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ.

Exit mobile version