Site icon PowerTV

ನಟಿಯ ಯಾವ ಫೈಲ್​ಗೆ ಸಹಿ ಮಾಡಿದ್ರು ಕುಮಾರಸ್ವಾಮಿ?

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೋಟೆಲ್​ನಲ್ಲಿ ಭೇಟಿಯಾದ ನಟಿ ಕೊಟ್ಟ ಫೈಲ್​ಗೆ ಸಹಿ ಹಾಕಿದ್ರು ಅನ್ನೋ ಆರೋಪ ಕೇಳಿಬಂದಿದೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಮಾಜಿ ಸಿಎಂ ಬಗ್ಗೆ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ.


ಬೈ ಎಲಕ್ಷನ್ ಪ್ರಚಾರದಲ್ಲಿ ನಿರತರಾಗಿರೋ ಸೋಮಶೇಖರ್ ಕುಮಾರಸ್ವಾಮಿ ವಿರುದ್ಧ ಕೆಂಡಾಮಂಡಲರಾದ ಸೋಮಶೇಖರ್, ”ಕುಮಾರಸ್ವಾಮಿ ಖಾಸಗಿ ಹೋಟೆಲ್​ನಲ್ಲಿ ಹೆಚ್​ಡಿಕೆ ಚಿತ್ರನಟಿಯೊಬ್ಬರನ್ನ ಭೇಟಿಯಾಗಿದ್ರು. ನಟಿ ಫೈಲ್​ಗೆ ಸಹಿ ಹಾಕಿಸಿಕೊಂಡು ಹೋಗಿದ್ರು. ನಟಿ ಸಹಿ ಹಾಕಿಸಿಕೊಂಡು ಹೋದ ಆ ಸುದ್ದಿ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು” ಎಂದು ಹೇಳಿದ್ದಾರೆ. ಯಾವ ಹೋಟೆಲ್​ನಲ್ಲಿ ನಿಂತು ಯಾವ ಫೈಲ್​ಗೆ ಸಹಿ ಹಾಕಿದ್ರಿ? ಅಂತ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ ಅವರು, ಆ ಬಗ್ಗೆ ಬಗ್ಗೆ ಮಾತಾಡಲು ಹೋಗಲ್ಲ ಎಂದರು.

Exit mobile version