Site icon PowerTV

“ಬಿಎಸ್​​ವೈ ಹೋರಿ, ರಾಘವೇಂದ್ರ ಕರು – ನಾನಾಗ್ಬೇಕು ಸಿಎಂ”!

ಶಿವಮೊಗ್ಗ : ‘ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೋರಿ, ಅವರ ಪುತ್ರ, ಸಂಸದ ಬಿ ವೈ ರಾಘವೇಂದ್ರ ಕರು -ನಾನಾಗ್ಬೇಕು ಸಿಎಂ’! ಇದು ಬಿಜೆಪಿ ಮುಖಂಡ ಎಂಎಲ್​ಸಿ ಆಯನೂರು ಮಂಜುನಾಥ್ ಹೇಳಿಕೆ.
ಹೌದು ನೂತನ ರೈಲು ಚಾಲನೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲಾ ರೈಲು ಬಿಡ್ತಾರೆ. ರಾಘವೇಂದ್ರ ನಿಜವಾದ ರೈಲು ಬಿಟ್ಟಿದ್ದಾರೆ ಎಂದು ಮೆಚ್ಚುಗೆ ನುಡಿಗಳನ್ನಾಡಿದ್ರು. ಜಿಲ್ಲೆಯಲ್ಲಿ ಇಬ್ಬರು ಉತ್ತಮ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ.ಯಡಿಯೂರಪ್ಪ ಅವರನ್ನು‌ ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟರೆ ಶಿವಮೊಗ್ಗ ಹಾಗೂ ರಾಜ್ಯದ ಚಿತ್ರಣವನ್ನೇ ಬದಲಾಯಿಸ್ತಾರೆ.
ರಾಘವೇಂದ್ರ ಸಂಸದರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಶಾಶ್ವತ ಸಂಸದರಾಗಿ ಇರಬೇಕು. ಮತ್ತೆ ರಾಜ್ಯ ರಾಜಕಾರಣಕ್ಕೆ ವಾಪಸ್ ಬರಬಾರದು. ಯಾಕಂದ್ರೆ ಮುಂದಿನ ಸಿಎಂ ನಾನಾಗಬೇಕು ಅಂತಿದ್ದೀನಿ ತಮ್ಮ ನಗೆ ಚಟಾಕಿ ಹಾರಿಸಿದ್ರು.

Exit mobile version