Site icon PowerTV

`ಸಿದ್ದರಾಮಯ್ಯ ದೊಡ್ಡ ಶನಿ’ ಅಂದ ಕಾಂಗ್ರೆಸ್ ಹಿರಿಯ ಮುಖಂಡ!

ಮಂಗಳೂರು : ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ದೊಡ್ಡ ಶನಿ ಅಂತೆ! ಹೀಗಂತ ಹೇಳಿರೋದು ಬಿಜೆಪಿಯ ಯಾವ ನಾಯಕರೂ ಅಲ್ಲ. ಸ್ವತಃ ಕಾಂಗ್ರೆಸ್ಸಿನ ಹಿರಿಯ ಮುಖಂಡ.
ಹೌದು, ಮಂಗಳೂರಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶನಿ. ಅವರು ಪಕ್ಷವನ್ನು ಮುಗಿಸಿಯೇ ಹೋಗುವುದು. ಇದು ದೇವರಿಗೂ ಗೊತ್ತಿದೆ. ಅವರಿಗೆ ಹೆಚ್ಚು ಅಧಿಕಾರ ಕೊಡೋದು ತಪ್ಪು. ಆ ತಪ್ಪು ಮತ್ತೆ ಮಾಡ್ಬೇಡಿ ಅಂತ ಹೈಕಮಾಂಡಿಗೂ ಹೇಳ್ತೀನಿ ಎಂದು ಕಿಡಿಕಾರಿದ್ದಾರೆ.


ಸಿದ್ದರಾಮಯ್ಯ ಇಷ್ಟರವರೆಗೆ ಎಲ್ಲಿದ್ದರು, ಈಗ ಅವರಿಗೆ ಮಂಗಳೂರಿನಲ್ಲಿ ಕಾಂಗ್ರೆಸ್ ಇದೆ ಅಂತ ಗೊತ್ತಾಗಿದೆ. ಅವರು ನಾಳೆ ಮಂಗಳೂರಿಗೆ ಬಂದು ಮಾತನಾಡಲಿ, ಮರುದಿನ ಅದಕ್ಕೆ ಉತ್ತರ ಕೊಡ್ತೇನೆ. ದ.ಕ ಮತ್ತು ಉಡುಪಿ ವಿಧಾನಸಭೆ, ಲೋಕಸಭೆ ಕಾಂಗ್ರೆಸ್ ಸೋಲಿಗೆ ಹಿರಿಯರ ಕಡೆಗಣನೆ ಕಾರಣ. ಈ ಮಾತು ನೂರಕ್ಕೆ‌ ನೂರು ಸತ್ಯ, ಇದರಲ್ಲಿ ಸ್ವಲ್ಪವೂ ಸುಳ್ಳಿಲ್ಲ ಎಂದು ಹೇಳಿದ್ದಾರೆ.

Exit mobile version