Site icon PowerTV

ಪಟಾಕಿಯಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆ ಸಿಲುಕಿ ದುರ್ಮರಣ!

ಬೆಂಗಳೂರು ಗ್ರಾಮಾಂತರ : ಪಟಾಕಿಯಿಂದ ತಪ್ಪಿಸಿಕೊಳ್ಳಲು ಹೋಗಿ ವ್ಯಕ್ತಿಯೊಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿದ ಧಾರುಣ ಘಟನೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

ಹಬ್ಬದ ಸಂಭ್ರಮದಲ್ಲಿ ಪಟಾಕಿ ತಂದ ಸಾವಿನ ಸುದ್ದಿ ಇದು. ಮಂಜುನಾಥ್ ಎಂಬುವವರು ಮೃತ ದುರ್ದೈವಿ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಜಯನಗರದಲ್ಲಿ ತಮ್ಮ ಮನೆ ಮುಂದೆ ಮಂಜುನಾಥ್ ಪಟಾಕಿ ಹಚ್ಚುತ್ತಿದ್ದರು. ಈ ವೇಳೆ ಪಟಾಕಿಯಿಂದ ತಪ್ಪಿಸಿಕೊಳ್ಳಲು ರೈಲ್ವೆ ಹಳಿಯತ್ತ ಓಡಿ ಆಕಸ್ಮಿಕವಾಗಿ ಕಾಚಿಗುಡ ಎಕ್ಸ್​ಪ್ರೆಸ್​ ರೈಲಿಗೆ ಸಿಲುಕಿ ಪತ್ನಿ ಎದುರೇ ಕೊನೆಯುಸಿರೆಳೆದಿದ್ದಾರೆ.
ವಸತಿ ಪ್ರದೇಶದಲ್ಲಿ ಹಾದು ಹೋಗುವ ರೈಲ್ವೆ ಮಾರ್ಗಕ್ಕೆ ಯಾವುದೇ ಅಡೆತಡೆಯಿಲ್ಲ. ರೈಲ್ವೆ ಹಳಿಗೆ ಯಾವ್ದೇ ತಡೆಗೋಡೆಗಳಿಲ್ಲದೆ ಪದೇ ಪದೇ ಇಂಥಾ ದುರಂತಗಳು ಸಂಭವಿಸಿವೆ. ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version