Site icon PowerTV

ವಯಸ್ಸು 61, ಕದ್ದಿದ್ದು 159 ಸೈಕಲ್ ಸೀಟ್​ಗಳನ್ನ ಮಾತ್ರ – ಕಾರಣ ರಿವೇಂಜ್​!

ನೀವು ಸಾಕಷ್ಟು ಕಳ್ಳತನ ಪ್ರಕರಣಗಳನ್ನು ನೋಡಿರ್ತೀರಾ… ದಿನಂಪ್ರತಿ ಒಂದಲ್ಲ ಒಂದು ಕಳ್ಳತನದ ಸ್ಟೋರಿಗಳನ್ನು ನೋಡ್ತಾನೇ ಇರ್ತೀರಾ! ಆದ್ರೆ ಇಂಥಾ ಸ್ಟೋರಿ ಕೇಳೇ ಇಲ್ಲ ಬಿಡಿ!
ಆತ ಟೋಕಿಯಾದ 61 ವರ್ಷದ ಅಕಿಯಾ ಹಟೋರಿ. ಒಂಥರಾ ಡಿಫ್ರೆಂಟ್ ಕಳ್ಳ. ಕದಿದ್ದು ಬರೀ ಸೈಕಲ್ ಸೀಟುವಗಳನ್ನು ಮಾತ್ರ..! ಒಂದೆರಡಲ್ಲ 159 ಸೀಟುಗಳನ್ನು! ಸೈಕಲ್ ಸಿಕ್ಕರೂ ಅದನ್ನು ಕದಿಯದೆ ಸೀಟ್ ಎಗರಿಸಿ ಪರಾರಿ ಆಗ್ತಿದ್ದ ಆಸಾಮಿ! ಆದ್ರೆ ಇಷ್ಟು ದಿನ ಸಿಕ್ಕಿಬಿದ್ದಿರ್ಲಿಲ್ಲ. ಇತ್ತೀಚೆಗೆ ಮಾಲೊಂದರಲ್ಲಿ ಸೈಕಲ್ ಸೀಟ್ ಕದ್ದಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಅರೆಸ್ಟ್ ಮಾಡಿದ್ದಾರೆ.  
ಪೊಲೀಸರ ವಿಚಾರಣೆ ವೇಳೆ ಹಟೋರಿ ಸೇಡಿನ ಕಥೆಯೊಂದನ್ನು ಹೇಳಿದ್ದಾನೆ.

2018ರಲ್ಲಿ ಮನೆ ಹೊರಗೆ ನಿಲ್ಲಿಸಿದ್ದ ಹಟೋರಿ ಸೈಕಲ್ ಸೀಟನ್ನು ಯಾರೋ ಎಗರಿಸಿದ್ದಾರಂತೆ. ಅವತ್ತು ಸಿಟ್ಟಿಗೆದ್ದು ಹಟೋರಿ ಸಿಕ್ಕ ಸಿಕ್ಕ ಸೈಕಲ್ ಸೀಟುಗಳನ್ನು ಎಗರಿಸಲು ಶುರುಮಾಡಿದ್ನಂತೆ. ಸೇಡಿಗಾಗಿ ಸೀಟು ಕದಿಯಲು ಶುರುಮಾಡಿದ ಈತ, ಇದುವರೆಗೆ 159 ಸೀಟುಗಳನ್ನು ಕದ್ದಿದ್ದಾನೆ. ರಿವೇಂಜಿಗಾಗಿ ಸೀಟು ಕದಿಯುತ್ತಿದ್ದೆ ಎಂಬ ಹಟೋರಿ ಹೇಳಿಕೆ ನಿಜಕ್ಕೂ ಅಚ್ಚರಿ, ಸೋಜಿಗ.

Exit mobile version