Site icon PowerTV

ಕಂಪ್ಲೆಂಟ್​ ಕೊಡಲು ಬಂದು ಪೇದೆಯ ಬೆರಳು ಕಚ್ಚಿ ಕತ್ತರಿಸಿದ..!

ತೆಲಂಗಾಣ : ಕಂಪ್ಲೆಂಟ್ ಕೊಡಲೆಂದು ಪೊಲೀಸ್ ಸ್ಟೇಷನ್ನಿಗೆ ಬಂದ ವ್ಯಕ್ತಿ ಪೊಲೀಸ್ ಪೇದೆಯ ಬೆರಳನ್ನು ಕಚ್ಚಿ ಕತ್ತರಿಸಿರುವ ಘಟನೆ ಖುಮ್ಮಂ ನಗರ ಠಾಣೆಯಲ್ಲಿ ನಡೆದಿದೆ.
ನಾಯಾ ಬ್ರಾಹ್ಮಣ ನಗರದ ಡುಂಗ್ರೋತು ಮಸ್ತಾನ್​ ಎಂಬ ವಿಶೇಷ ಚೇತನ ತನ್ನ ಇಬ್ಬರು ಸ್ನೇಹಿತರ ಜೊತೆ ಮಧ್ಯರಾತ್ರಿ ಯಾವುದೋ ದೂರು ನೀಡಲೆಂದು ಖುಮ್ಮಂ ನಗರ ಠಾಣೆಗೆ ಹೋಗಿದ್ದಾನೆ. ಪೇದೆ ಮನ್ಸೂರ್ ಅಲಿ ವಿವರಣೆ ಪಡೆಯುತ್ತಿದ್ದಾಗ ಮಸ್ತಾನ್ ಇದ್ದಕ್ಕಿದ್ದಂತೆ ದಾಳಿ ಮಾಡಿ, ಮನ್ಸೂರ್ ಅಲಿಯ ತೊಡೆಗೆ ಕಚ್ಚಿ, ನಂತರ ಎಡಗೈ ಕಿರುಬೆರಳನ್ನು ಕಚ್ಚಿ ಕತ್ತರಿಸಿದ್ದಾನೆ. ಅಷ್ಟರಲ್ಲಿ ಆತನೊಂದಿಗೆ ಬಂದಿದ್ದ ಇಬ್ಬರು ಎಸ್ಕೇಪ್ ಆಗಿದ್ದಾರೆ. ಮಸ್ತಾನನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಮಸ್ತಾನ್ ವಿಚಾರಣೆ ವೇಳೆ ಎಎಸ್​ಐ ನಾಗೇಶ್ವರ್​ ರಾವ್ ಮೇಲೆಯೂ ದಾಳಿ ನಡೆಸಿದ್ದು, ಮದ್ಯಪಾನ ಮಾಡಿ ಠಾಣೆಗೆ ಬಂದಿದ್ದ ಎಂದು ವರದಿಯಾಗಿದೆ.

Exit mobile version