Site icon PowerTV

ಎಲ್ಲಿದ್ದಾರಯ್ಯ? ಕತ್ತೆ ಕಾಯೋಕೆ ಹೋಗಿದ್ದಾರಾ? : ಸಿದ್ದರಾಮಯ್ಯ ಫುಲ್ ಗರಂ!

ಬಾದಾಮಿ : ಎಲ್ಲಿದ್ದಾರಯ್ಯ? ಕತ್ತೆ ಕಾಯೋಕೆ ಹೋಗಿದ್ದಾರಾ? ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ.
ಸಿದ್ದರಾಮಯ್ಯ ಇಂದು ಸ್ವಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪ್ರವಾಸ ಕೈಗೊಂಡಿದ್ದರು. ಗೋವಿನಕೊಪ್ಪ ಗ್ರಾಮದಲ್ಲಿ ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದರು. ಮಾಜಿ ಸಿಎಂ ಭೇಟಿ ನೀಡಿದ್ರೂ ಅಧಿಕಾರಿಗಳು ಗ್ರಾಮಕ್ಕೆ ಬಂದಿರಲಿಲ್ಲ. ಇದರಿಂದ ಸಹಜವಾಗಿ ಸಿಟ್ಟಾದ ಸಿದ್ದರಾಮಯ್ಯ, ಎಲ್ಲಿದ್ದಾರಯ್ಯ ಅಧಿಕಾರಿಗಳು? ಕತ್ತೆ ಕಾಯೋಕೆ ಹೋಗಿದ್ದಾರಾ? ಅಂತ ಗರಂ ಆದರು.
ಇನ್ನು ಕಿತ್ತಲೆ ಗ್ರಾಮದಲ್ಲಿ ಅಜ್ಜಿಯೊಬ್ಬರು ಸಿದ್ದರಾಮಯ್ಯ ಅವರ ಕಾರು ತಡೆದು ಮನೆಯಿಲ್ಲ ಮನೆ ಕೊಡ್ಸಿ ಅಂತ ಅಳಲು ತೋಡಿಕೊಂಡ್ರು. ಸಿದ್ದರಾಯ್ಯ ಆಯ್ತು ಮಾಡಿಸ್ತೀನಿ ಅಂತ ವೃದ್ಧೆಗೆ ಅಭಯ ನೀಡಿದ್ರು.

Exit mobile version